Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬಂಟ್ವಾಳ: ಅಕ್ಬರ್ ಅಲಿ ಕುಟುಂಬದ ಮನವಿಗೆ ಸ್ಪಂದಿಸಿದ ಶಾಸಕ ಅಶೋಕ್ ರೈ: ಸಿಎಂ ಪರಿಹಾರ ನಿಧಿಯಿಂದ ₹3 ಲಕ್ಷ ಪರಿಹಾರ..!!

    ಬಂಟ್ವಾಳ: ಅಕ್ಬರ್ ಅಲಿ ಕುಟುಂಬದ ಮನವಿಗೆ ಸ್ಪಂದಿಸಿದ ಶಾಸಕ ಅಶೋಕ್ ರೈ: ಸಿಎಂ ಪರಿಹಾರ ನಿಧಿಯಿಂದ ₹3 ಲಕ್ಷ ಪರಿಹಾರ..!!

    ಭಾರೀ ಮಳೆ ಹಿನ್ನೆಲೆ: ಪುತ್ತೂರು ಉಪವಿಭಾಗದ ಶಾಲೆ, ಪಿಯು ಕಾಲೇಜು ಗಳಿಗೆ ನಾಳೆ(ಆ.08) ರಜೆ..!!

    ಭಾರೀ ಮಳೆ ಹಿನ್ನೆಲೆ: ಪುತ್ತೂರು ಉಪವಿಭಾಗದ ಶಾಲೆ, ಪಿಯು ಕಾಲೇಜು ಗಳಿಗೆ ನಾಳೆ(ಆ.08) ರಜೆ..!!

    ಪುತ್ತೂರಿನ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಾಲಯಕ್ಕೆ ಸಿ.ಟಿ. ರವಿ ಭೇಟಿ..!

    ಪುತ್ತೂರಿನ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಾಲಯಕ್ಕೆ ಸಿ.ಟಿ. ರವಿ ಭೇಟಿ..!

    ವಿಟ್ಲ: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು..!!

    ವಿಟ್ಲ: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು..!!

    ನೇಣು ಬಿಗಿದು ಯುವತಿ ಆತ್ಮಹತ್ಯೆ..!

    ನೇಣು ಬಿಗಿದು ಯುವತಿ ಆತ್ಮಹತ್ಯೆ..!

    ಬಂಟ್ವಾಳದಲ್ಲಿ ಭೀಕರ ಅಪಘಾತ: ಟಿಪ್ಪರ್ ಡಿಕ್ಕಿಗೆ ಸ್ಕೂಟರ್ ಸವಾರ ಸಾವು, ಮತ್ತೋರ್ವ ಗಂಭೀರ..!!

    ಬಂಟ್ವಾಳದಲ್ಲಿ ಭೀಕರ ಅಪಘಾತ: ಟಿಪ್ಪರ್ ಡಿಕ್ಕಿಗೆ ಸ್ಕೂಟರ್ ಸವಾರ ಸಾವು, ಮತ್ತೋರ್ವ ಗಂಭೀರ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಚೆನ್ನರಾಯಪಟ್ಟಣದಲ್ಲಿ ಅಪಘಾತಕ್ಕೆ ಬಲಿಯಾಗಿದ್ದ ದೇವಿಪ್ರಸಾದ್ ಶೆಟ್ಟಿ ರವರಿಗೆ ಈಶ್ವರಮಂಗಲದಲ್ಲಿ ಅಂತಿಮ ನಮನ: ಚೊಚ್ಚಲ ಹೆರಿಗೆಗೆ ದಾಖಲಾಗಿದ್ದ ದೇವಿಪ್ರಸಾದ್ ಶೆಟ್ಟಿ ಪತ್ನಿಗೆ ಗಂಡು ಮಗು ಜನನ..!!

January 16, 2022
in ಪುತ್ತೂರು
0
ಚೆನ್ನರಾಯಪಟ್ಟಣದಲ್ಲಿ ಅಪಘಾತಕ್ಕೆ ಬಲಿಯಾಗಿದ್ದ  ದೇವಿಪ್ರಸಾದ್ ಶೆಟ್ಟಿ ರವರಿಗೆ ಈಶ್ವರಮಂಗಲದಲ್ಲಿ ಅಂತಿಮ ನಮನ: ಚೊಚ್ಚಲ ಹೆರಿಗೆಗೆ ದಾಖಲಾಗಿದ್ದ ದೇವಿಪ್ರಸಾದ್ ಶೆಟ್ಟಿ ಪತ್ನಿಗೆ ಗಂಡು ಮಗು ಜನನ..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು: ಹಾಸನ ಜಿಲ್ಲೆಯ ಚೆನ್ನರಾಯ ಪಟ್ಟಣದಲ್ಲಿ ಜ.14 ರಂದು ಕಾರು ಮತ್ತು ಟಿಪ್ಪರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ ಈಶ್ವರಮಂಗಲ ಬಂಟಕಲ್ಲು ನಿವಾಸಿ ದೇವಿಪ್ರಸಾದ್ ಶೆಟ್ಟಿ(33) ರವರ ಪತ್ನಿ ಜ.15 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

Advertisement
Advertisement
Advertisement

ಅಪಘಾತದಲ್ಲಿ ಮೃತಪಟ್ಟಿದ್ದ ದೇವಿಪ್ರಸಾದ್ ಶೆಟ್ಟಿಯವರ ಮೃತದೇಹವನ್ನು ಜ.14 ರಂದು ರಾತ್ರಿಯೇ ಚೆನ್ನರಾಯಪಟ್ಟಣದಿಂದ ತಂದು, ಮೃತರ ಪತ್ನಿ ಅಕ್ಷತಾ ಹೆರಿಗೆಗಾಗಿ ದಾಖಲಾಗಿದ್ದ ಕೋಟೆಶ್ವರ ಆಸ್ಪತ್ರೆಗೆ ಕೊಂಡೊಯ್ದು ಅವರಿಗೆ ಮುಖದರ್ಶನ ಮಾಡಿಸಲಾಗಿತ್ತು. ಪತಿಯ ಅಕಾಲಿಕ ಸಾವಿನಿಂದಾಗಿ ದುಃಖದ ಮಡುವಿನಲ್ಲಿ ಮುಳುಗಿದ್ದ ಅಕ್ಷತಾ ರವರು ಜ.15 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ದೇವಿಪ್ರಸಾದ್ ಶೆಟ್ಟಿ ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಕಳೆದ ಬಾರಿಯ ಕೋವಿಡ್ ಮಹಾಮಾರಿಯ ಸಂದರ್ಭ ಊರಿಗೆ ಬಂದು ಬಳಿಕ ಬೆಂಗಳೂರಿನಲ್ಲಿ ಇನ್ಫೋಸಿಸ್ ನಲ್ಲಿ ಉದ್ಯೋಗದಲ್ಲಿದ್ದ ದೇವಿಪ್ರಸಾದ್ ಶೆಟ್ಟಿಯವರು ಪರೋಪಕಾರಿಯಾಗಿ ಗುರುತಿಸಿಕೊಂಡಿದ್ದರು.ಊರಲ್ಲಿ ಯಾರಿಗಾದರೂ ಅಸೌಖ್ಯವಿದ್ದು ಆರ್ಥಿಕ ಅಡಚಣೆ ಎದುರಾಗಿದ್ದ ಸಂದರ್ಭದಲ್ಲಿ ತನ್ನಿಂದಾದ ಸಹಾಯವನ್ನು ಮಾಡುತ್ತಿದ್ದರು. ಇತ್ತೀಚೆಗಷ್ಟೆ ಅಪಘಾತದಿಂದ ಗಾಯಗೊಂಡಿದ್ದ ಬಡಕುಟುಂಬದ ಯುವಕನೋರ್ವನ ಚಿಕಿತ್ಸೆಗೆಂದು ಆರ್ಥಿಕ ನೆರವು ನೀಡಿದ್ದ ದೇವಿಪ್ರಸಾದ್ ಮುಂದೆಯೂ ಅಗತ್ಯವಿದ್ದಾಗ ಸಾಧ್ಯವಾದರೆ ಕೊಡುವುದಾಗಿ
ವಾಗ್ದಾನ ಮಾಡಿದ್ದರು.

Advertisement

ಅಶಕ್ತರ ನೆರವಿಗೆಂದು ಈಶ್ವರಮಂಗಲದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಆ್ಯಂಬುಲೆನ್ಸ್ ಒಂದನ್ನು ಖರೀದಿಮಾಡಿದ್ದ ಸಂದರ್ಭ ದೇವಿಪ್ರಸಾದ್ ಶೆಟ್ಟಿಯವರೂ ಆರ್ಥಿಕ ಸಹಾಯ ಮಾಡಿದ್ದರು. ದುರಾದೃಷ್ಟವೆನ್ನುವಂತೆ ಅದೇ ಆ್ಯಂಬುಲೆನ್ಸ್‌ನಲ್ಲಿಯೇ ಅವರ ಮೃತದೇಹವನ್ನು ಚೆನ್ನರಾಯಪಟ್ಟಣದಿಂದ ಕರೆತರಲಾಯಿತು.

Advertisement

ಚಿಕ್ಕಪುತ್ತೂರು ಹಿಂದೂರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಈ ಮಧ್ಯೆ ಈಶ್ವರಮಂಗಲ ಪೇಟೆಯಲ್ಲಿ ಸಾರ್ವಜನಿಕರಿಗೆ ಮೃತದೇಹದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ನೂರಾರು ಮಂದಿ ಮೃತದೇಹದ ಅಂತಿಮ ದರ್ಶನ ಪಡೆದು, ನೆಚ್ಚಿನ ಗೆಳೆಯನಿಗೆ ಅಂತಿಮ ನಮನ ಸಲ್ಲಿಸಿದರು.

ದೇವಿಪ್ರಸಾದ್ಅವರು ಅಪಘಾತಕ್ಕೆ ಬಲಿಯಾಗಿರುವುದರಿಂದ ಈಶ್ವರಮಂಗಲ ಪರಿಸರದಲ್ಲಿ ಸ್ಮಶಾನ ಮೌನ ಆವರಿಸಿದೆ. ಮೃತ ದೇವಿಪ್ರಸಾದ್ ಶೆಟ್ಟಿಯವರು ತಾಯಿ ಸುಮತಿ, ಪತ್ನಿ ಅಕ್ಷತಾ ಹಾಗೂ ನವಜಾತ ಗಂಡು ಮಗುವನ್ನು ಅಗಲಿದ್ದಾರೆ.

ಚನ್ನರಾಯಪಟ್ಟಣದಲ್ಲಿ ಮಾರುತಿ ಅಲ್ಟೊ ಕಾರು ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿ, ಇನ್ಫೋಸಿಸ್ ಉದ್ಯೋಗಿಗಳಾಗಿದ್ದ ದೇವಿಪ್ರಸಾದ್ ಶೆಟ್ಟಿ ಹಾಗೂ ವಿಟ್ಲ ಬಾರಬೆಟ್ಟು ಸುದರ್ಶನ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.ಕಾರಿನ ಹಿಂಬದಿ ಸೀಟಲ್ಲಿದ್ದ ಸರ್ವೆ ಸೊರಕೆ
ನಿವಾಸಿ ಪ್ರಮೋದ್ ಸುವರ್ಣ ಅವರು ತೀವ್ರ ಗಾಯಗೊಂಡಿದ್ದು ಅವರನ್ನು ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Previous Post

ಬೊಳುವಾರು: ಸ್ಕೂಟರ್ ಮತ್ತು ಕಾರು ನಡುವೆ ಡಿಕ್ಕಿ: ಓಂ ಕಾರ್ ಸ್ವೀಟ್ಸ್ ನ ಮಾಲಕ ಚಂದ್ರಹಾಸ ರವರಿಗೆ ಗಾಯ..!!

Next Post

ಕಡಬ: ನಾಪತ್ತೆಯಾಗಿದ್ದ ಯುವತಿ ಪ್ರಿಯಕರನೊಂದಿಗೆ ಮದುವೆಯಾಗಿ ಪತ್ತೆ..!!

OtherNews

ಬಂಟ್ವಾಳ: ಅಕ್ಬರ್ ಅಲಿ ಕುಟುಂಬದ ಮನವಿಗೆ ಸ್ಪಂದಿಸಿದ ಶಾಸಕ ಅಶೋಕ್ ರೈ: ಸಿಎಂ ಪರಿಹಾರ ನಿಧಿಯಿಂದ ₹3 ಲಕ್ಷ ಪರಿಹಾರ..!!
ಪುತ್ತೂರು

ಬಂಟ್ವಾಳ: ಅಕ್ಬರ್ ಅಲಿ ಕುಟುಂಬದ ಮನವಿಗೆ ಸ್ಪಂದಿಸಿದ ಶಾಸಕ ಅಶೋಕ್ ರೈ: ಸಿಎಂ ಪರಿಹಾರ ನಿಧಿಯಿಂದ ₹3 ಲಕ್ಷ ಪರಿಹಾರ..!!

August 7, 2026
ಭಾರೀ ಮಳೆ ಹಿನ್ನೆಲೆ: ಪುತ್ತೂರು ಉಪವಿಭಾಗದ ಶಾಲೆ, ಪಿಯು ಕಾಲೇಜು ಗಳಿಗೆ ನಾಳೆ(ಆ.08) ರಜೆ..!!
Featured

ಭಾರೀ ಮಳೆ ಹಿನ್ನೆಲೆ: ಪುತ್ತೂರು ಉಪವಿಭಾಗದ ಶಾಲೆ, ಪಿಯು ಕಾಲೇಜು ಗಳಿಗೆ ನಾಳೆ(ಆ.08) ರಜೆ..!!

August 7, 2026
ಪುತ್ತೂರಿನ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಾಲಯಕ್ಕೆ ಸಿ.ಟಿ. ರವಿ ಭೇಟಿ..!
Featured

ಪುತ್ತೂರಿನ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಾಲಯಕ್ಕೆ ಸಿ.ಟಿ. ರವಿ ಭೇಟಿ..!

August 7, 2026
ವಿಟ್ಲ: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು..!!
Featured

ವಿಟ್ಲ: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು..!!

August 7, 2026
ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ
ಪುತ್ತೂರು

ಪೆರ್ನೆಯಲ್ಲಿ ವಿದ್ಯುತ್ ಆಘಾತದಿಂದ ಕಾರ್ಮಿಕ ಮೃತ್ಯು : ಕುಟುಂಬಕ್ಕೆ 3 ಲಕ್ಷ ಪರಿಹಾರ ಮಂಜೂರು – ಶಾಸಕ ಅಶೋಕ್ ರೈ

August 6, 2026
(ಆ.09) : ಮಾಣಿಲ ಶ್ರೀ ಕ್ಷೇತ್ರಕ್ಕೆ ಪುತ್ತೂರಿನ ಭಕ್ತರಿಂದ ‘ಹಸಿರುವಾಣಿ ಹೊರೆಕಾಣಿಕೆ’..!
ಪುತ್ತೂರು

(ಆ.09) : ಮಾಣಿಲ ಶ್ರೀ ಕ್ಷೇತ್ರಕ್ಕೆ ಪುತ್ತೂರಿನ ಭಕ್ತರಿಂದ ‘ಹಸಿರುವಾಣಿ ಹೊರೆಕಾಣಿಕೆ’..!

August 6, 2026

Leave a Reply Cancel reply

Your email address will not be published. Required fields are marked *

Recent News

ರಸ್ತೆ ಅಪಘಾತ: ಕಾರು ಜಖಂ..!!

ರಸ್ತೆ ಅಪಘಾತ: ಕಾರು ಜಖಂ..!!

August 8, 2026
ರಸ್ತೆ ಬದಿ ನಿಂತಿದ್ದ ಸಿಲಿಂಡರ್ ಲಾರಿಗೆ ಕಾರು ಡಿಕ್ಕಿ – ಮೂವರು ದುರ್ಮರಣ..!!

ರಸ್ತೆ ಬದಿ ನಿಂತಿದ್ದ ಸಿಲಿಂಡರ್ ಲಾರಿಗೆ ಕಾರು ಡಿಕ್ಕಿ – ಮೂವರು ದುರ್ಮರಣ..!!

August 8, 2026
ರಸ್ತೆ ತಿರುವಿನಲ್ಲಿ ಲಾರಿ ನಿಲ್ಲಿಸಿ, ಕೀ ಸಮೇತ ಚಾಲಕ ಪರಾರಿ..!!

ರಸ್ತೆ ತಿರುವಿನಲ್ಲಿ ಲಾರಿ ನಿಲ್ಲಿಸಿ, ಕೀ ಸಮೇತ ಚಾಲಕ ಪರಾರಿ..!!

August 7, 2026
ಬಂಟ್ವಾಳ: ಅಕ್ಬರ್ ಅಲಿ ಕುಟುಂಬದ ಮನವಿಗೆ ಸ್ಪಂದಿಸಿದ ಶಾಸಕ ಅಶೋಕ್ ರೈ: ಸಿಎಂ ಪರಿಹಾರ ನಿಧಿಯಿಂದ ₹3 ಲಕ್ಷ ಪರಿಹಾರ..!!

ಬಂಟ್ವಾಳ: ಅಕ್ಬರ್ ಅಲಿ ಕುಟುಂಬದ ಮನವಿಗೆ ಸ್ಪಂದಿಸಿದ ಶಾಸಕ ಅಶೋಕ್ ರೈ: ಸಿಎಂ ಪರಿಹಾರ ನಿಧಿಯಿಂದ ₹3 ಲಕ್ಷ ಪರಿಹಾರ..!!

August 7, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.