ವಿಟ್ಲ: ತುಂಬಿಸಿ ಇಟ್ಟಿದ್ದ ಗೋಣಿ ಚೀಲದಿಂದ ಹಸಿ ಅಡಿಕೆಯನ್ನು ವ್ಯಕ್ತಿಯೊಬ್ಬ ಕದ್ದೊಯ್ದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಡ್ಕಿದು ಗ್ರಾಮದ ಕೊಂಕೋಡಿ ಎಂಬಲ್ಲಿ ತಿರುಮಲೇಶ್ವರ ಭಟ್ ಎಂಬವರು ಜ.17 ರಂದು ತನ್ನ ತೋಟದ ಹಣ್ಣು ಅಡಿಕೆಯನ್ನು ಹೆಕ್ಕಿ ಒಂದು ಚೀಲದಲ್ಲಿ ತುಂಬಿಸಿ ಇಟ್ಟಿದ್ದಾರೆ.
ಸಂಜೆ ವೇಳೆ ತಿರುಮಲೇಶ್ವರ ಭಟ್ ರವರು ಮತ್ತೆ ತೋಟದ ಬಳಿ ಹೋದಾಗ ಅದೇ ಗ್ರಾಮದ ಮೋಹನ್ ಎಂಬುವವರು ತುಂಬಿಸಿ ಇಟ್ಟಿದ್ದ ಗೋಣಿ ಚೀಲದಿಂದ ಅಡಿಕೆ ಹಣ್ಣನ್ನು ತುಂಬಿಸಿಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.
ಈ ವೇಳೆ ತಿರುಮಲೇಶ್ವರ ಭಟ್ ಬೊಬ್ಬೆ ಹಾಕಿದರೂ ಆತ ಓಡಿ ಹೋಗಿದ್ದು, ಕಳವಾದ ಅಡಿಕೆಯ ಮೌಲ್ಯ 2000 ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.