ವಿಟ್ಲ: ತಾನು ಪ್ರೀತಿಸುತ್ತಿದ್ದ ಯುವತಿಯನ್ನು ನೋಡಲು ಬಂದ ಸಮೀರ್ ಮತ್ತು ಆತನ ಸ್ನೇಹಿತ ಆಶಿಕ್ ಗೆ ಯುವತಿಯ ತಂದೆ, ಅಣ್ಣ ಮತ್ತು ಸಂಬಂಧಿಕರು ಸೇರಿ ಹಲ್ಲೆ ನಡೆಸಿದ ಘಟನೆ ಹೇಮಾಜೆಯಲ್ಲಿ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಂದು ಸಮೀರ್ ಮತ್ತು ಆತನ ತಂಡದವರು ಯುವತಿ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿ, ಯುವತಿಯ ತಾಯಿ ಮೇಲೆ ದಾಳಿ ನಡೆಸಿದ್ದಾರೆ ಎಂದು ಯುವತಿಯ ತಾಯಿ ಠಾಣೆಗೆ ದೂರು ನೀಡಿದ್ದಾರೆ.
ಕೂರ್ನಡ್ಕ ಹಕೀಂ, ಸಮೀರ್,ಇಸಾಕ್ ಸಹಿತ ಮೂವರ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಮರಿಯಮ್ಮ ರವರ ಮಗ ಹಕೀಂ ನಿಗೆ ಮತ್ತು ಸಮೀರ್ ಗೆ ಹಳೆಯ ದ್ವೇಷವಿದ್ದು, ಜ.19 ರಂದು ಮದ್ಯಾಹ್ನ ಆರೋಪಿಗಳಾದ ಕೂರ್ನಡ್ಕ ಹಕೀಂ, ಸಮೀರ್ ಹಾಗೂ ಇನ್ನೋರ್ವ ಮನೆಗೆ ನುಗ್ಗಿ ಮರಿಯಮ್ಮ ರವರ ಮೇಲೆ ಹಲ್ಲೆ ಮಾಡಿ, ನಮ್ಮ ವಿಚಾರಕ್ಕೆ ಬಂದರೆ ಕೊಂದು ಹಾಕುವುದಾಗಿ ಜೀವಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.