ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯಲ್ಲಿ ಫೆ. 27 ರಂದು ಕೆ.ಯಂ.ಎಫ್( ದ.ಕ ) ನೇಮಕಾತಿಗೆ ಸಂಬಂಧಿಸಿದಂತೆ ಫೆ.14 ರಿಂದ ಫೆ.19 ರವರೆಗೆ “ಉಚಿತ ಆನ್ಲೈನ್ ಪೂರ್ವತಯಾರಿ ತರಬೇತಿ” ನಡೆಯಲಿದೆ.
ರಾತ್ರಿ 07 ರಿಂದ 09ರವರೆಗೆ 2 ಗಂಟೆಗಳ ತರಬೇತಿಯನ್ನು ನೀಡಲಾಗುತ್ತದೆ. 200 ಅಂಕಗಳ ಪರೀಕ್ಷೆಗೆ ಸಂಬಂಧಿಸಿದಂತೆ ವಿಷಯಧಾರಿತ ತರಬೇತಿ ಇದಾಗಿದ್ದು 2021 ರ ಸಾಲಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಕೋವಿಡ್ ಕಾರಣದಿಂದ ಲಿಖಿತ ಪರೀಕ್ಷೆ ಮುಂದೂಡಲ್ಪಟ್ಟಿದ್ದು ಸದ್ಯ ಫೆ.27 ಕ್ಕೆ ಕೆ.ಯಂ. ಎಫ್ ಸಂಸ್ಥೆಯು ಲಿಖಿತ ಪರೀಕ್ಷೆಗೆ ದಿನಾಂಕ ನಿಗದಿ ಮಾಡಿದ್ದು ಪರೀಕ್ಷಾ ಪ್ರವೇಶ ಪತ್ರವನ್ನು (ಹಾಲ್ ಟಿಕೆಟ್) ಬಿಡುಗಡೆ ಗೊಳಿಸಿದೆ.
ಪ್ರವೇಶ ಪತ್ರ ಬೇಕಾದವರು ಕೂಡ ವಿದ್ಯಾಮಾತಾ ಅಕಾಡೆಮಿಯಲ್ಲಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಕೂಡ ನೇಮಕಾತಿಗೆ ಸಂಬಂಧಿಸಿದಂತೆ ಆನ್ಲೈನ್ ತರಗತಿಯನ್ನು 40 ದಿನಗಳ ಕಾಲ ವಿದ್ಯಾಮಾತಾ ಅಕಾಡೆಮಿ ನಡೆಸಿತ್ತು.
ಆಸಕ್ತರು ವಿದ್ಯಾಮಾತಾ ಅಕಾಡೆಮಿ ,ಹಿಂದೂಸ್ತಾನ್ ಕಾಂಪ್ಲೆಕ್ಸ್ ,ಎಪಿಎಂಸಿ ರಸ್ತೆ ,ಪುತ್ತೂರು ಇಲ್ಲಿ ಹೆಸರು ನೋಂದಾಯಿಸಬಹುದು. ಅಥವಾ ಬೆಳಿಗ್ಗೆ 10 ರಿಂದ ಸಾಯಂಕಾಲ 04 ರ ಒಳಗಾಗಿ ಮೊಬೈಲ್ ಸಂಖ್ಯೆ 9148935808/ 8590773486 ಕ್ಕೆ ತಮ್ಮ ಅರ್ಜಿ ನಂಬರ್ ನ್ನು ನೀಡಿ ಕಾರ್ಯಾಗಾರಕ್ಕೆ ಹೆಸರನ್ನು ದಿನಾಂಕ 15.ಫೆಬ್ರವರಿ-2022 ಒಳಗಾಗಿ ನೋಂದಾಣಿ ಮಾಡಬಹುದಾಗಿದೆ.