ಶಿವಮೊಗ್ಗ: ಇತ್ತೀಚಿಗೆ ಹತ್ಯೆಗೀಡಾಗಿದ್ದ ಹಿಂದೂ ಕಾರ್ಯಕರ್ತ ಹರ್ಷ ಅಂತಿಮಯಾತ್ರೆ ವೇಳೆ ಗಾಯಗೊಂಡ ಗಾಯಾಳುಗಳನ್ನು ಮೃತ ಹರ್ಷನ ಕುಟುಂಬಸ್ಥರು ಭೇಟಿ ಮಾಡಿದ್ದಾರೆ.
ಮೃತ ಹರ್ಷನ ಅಕ್ಕಂದಿರಾದ ರಜಿನಿ, ಅಶ್ವಿನಿ ಹಾಗೂ ತಾಯಿ ಪದ್ಮಾ ತಂದೆ ನಾಗರಾಜ್ ಗಾಯಾಳುಗಳನ್ನು ನೋಡಲು ಮೆಗ್ಗಾನ್ ಆಸ್ಪತ್ರೆಗೆ ಆಗಮಿಸಿದ್ದಾರೆ.
ಈ ವೇಳೆ ಅಶ್ರುವಾಯ ವೇಳೆ ಗಾಯಗೊಂಡಿದ್ದ ಇಬ್ಬರು ಯುವಕರ ಆರೋಗ್ಯ ವಿಚಾರಿಸಿದ್ದಾರೆ.
ಗಾಯಾಳುಗಳ ಜೊತೆ ಮಾತನಾಡಿದ ಕುಟುಂಬಸ್ಥರು ‘ಹೋದವರು ಹೋಗಲಿ ನೀವು ಚೆನ್ನಾಗಿರಿ. ನನ್ನ ತಮ್ಮನನ್ನು ಕಳೆದುಕೊಂಡಿದ್ದೇನೆ. ಇನ್ನೊಬ್ಬ ತಮ್ಮನಿಗೆ ಏನಾದ್ರು ಆದರೆ ಹೇಗೆ ತಡೆದುಕೊಳ್ಳಲಿ. ನಿಮ್ಮ ಕುಟುಂಬಕ್ಕೆ ಕ್ಷಮೆ ಕೇಳುತ್ತೇನೆ ಎಂದು ಹರ್ಷ ಅಕ್ಕ ಅಶ್ವಿನಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಇನ್ನು ಗಾಯಾಳು ಯುವಕರಿಗೆ ಕುಟುಂಬಸ್ಥರು ಧನ ಸಹಾಯ ಮಾಡಿದ್ದಾರೆಂದು ಮಾಹಿತಿ ಲಭ್ಯವಾಗಿದೆ.