ನವ ದೆಹಲಿ: ಚಿಕ್ಕ ಬ್ಯಾಂಕ್ಗಳ ವಿಲೀನದಿಂದ ದೊಡ್ಡ ಬ್ಯಾಂಕ್ಗಳು ಸೃಷ್ಟಿಯಾಗಲಿವೆ. ಹಾಗೆಂದು ಎಲ್ಲಾ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡುವುದಿಲ್ಲ. ದೇಶದ ಜನರ ಆಕಾಂಕ್ಷೆ ಈಡೇರಿಸುವ ದೃಷ್ಟಿಯಿಂದ ಬ್ಯಾಂಕ್ ವಿಲೀನ ಪ್ರಕ್ರಿಯೆ ಕೈಗೊಂಡಿದ್ದೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕೈಗೊಂಡ ಬ್ಯಾಂಕ್ ವಿಲೀನದ ತೀರ್ಮಾನ ದಿಢೀರ್ ನಿರ್ಧಾರವಲ್ಲ. ಹಲವು ವರ್ಷಗಳ ಚಿಂತನೆಯ ನಂತರವೇ ಈ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡದಿದ್ದರೂ ಬ್ಯಾಂಕ್ಗಳ ಖಾಸಗೀಕರಣ ಪೂರ್ಣಗೊಂಡ ನಂತರ ಅಲ್ಲಿಯ ಉದ್ಯೋಗಿಗಳ ಹಿತರಕ್ಷಣೆಗೆ ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಯಾವುದೇ ಬ್ಯಾಂಕ್ ಆಗಲಿ, ಖಾಸಗೀಕರಣ ಪ್ರಕ್ರಿಯೆ ನಂತರ ಅಲ್ಲಿಯ ಉದ್ಯೋಗಿಗಳು ಚಿಂತೆಗೊಳಗಾಗುವುದು ಬೇಡ. ಅಂತಹ ಬ್ಯಾಂಕ್ಗಳ ಉದ್ಯೋಗಿಗಳ ಹಿತಾಸಕ್ತಿಗೆ ಧಕ್ಕೆ ಬಾರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು. ಕೇಂದ್ರ ಸರ್ಕಾರ ಖಾಸಗೀಕರಣದ ಮೂಲಕ ಎಲ್ಲ ಬ್ಯಾಂಕ್ಗಳ ಮಾರಾಟ ಮಾಡುತ್ತಿದೆ ಎಂದು ವಿಪಕ್ಷಗಳು ದೂರುತ್ತಿವೆ. ಹೀಗೆ ದೂರುವುದು ಸರಿಯಲ್ಲ ಎಂದು ವಿಪಕ್ಷಗಳ ವಿರುದ್ಧ ಟೀಕಿಸಿದ ಅವರು, ಯುಪಿಎ ಸರ್ಕಾರದ ಕಾಲದಲ್ಲಿ ಬ್ಯಾಂಕ್ಗಳ ನಷ್ಟದಲ್ಲಿದ್ದವು ಎಂಬುದನ್ನು ರಾಹುಲ್ ಗಾಂಧಿ ನೆನಪಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಟೀಕೆಗೆ ಪ್ರತ್ಯುತ್ತರ ನೀಡಿದರು