ಯುದ್ಧ ಭೂಮಿಯಿಂದ ಸಮಾಧಾನಕರ ಸುದ್ದಿ ಹೊರ ಬಿದ್ದಿದ್ದು, ಉಕ್ರೇನ್ನ ಪ್ರಮುಖ ಎರಡು ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಉಕ್ರೇನ್‌ನಲ್ಲಿ ಸಿಲುಕಿದ ನಾಗರಿಕರ ಸ್ಥಳಾಂತರಕ್ಕಾಗಿ ಕದನ ವಿರಾಮ ಘೋಷಿಸಲಾಗಿದೆ.
ಮರಿಯುಪೋಲ್, ವೆಲ್ನೋವಾಖಾದಲ್ಲಿ ಕದನ ವಿರಾಮ ಘೋಷಣೇ ಮಾಡಲಾಗಿದೆ. ಭಾರತೀಯ ಕಾಲಮಾನ ಬೆಳಗ್ಗೆ 11.30ವೇಳೆಗೆ ತಾತ್ಕಾಲಿಕ ಕದನ ವಿರಾಮ ಘೋಷಣೆಯನ್ನ ರಷ್ಯಾ ಮಾಡಿದೆ. ಅದರಂತೆ ಉಕ್ರೇನಾದ್ಯಂತ ಯಾವುದೇ ಬಾಂಬ್ ದಾಳಿ, ಶೆಲ್ ದಾಳಿ ಹಾಗೂ ಏರ್ಸ್ಟ್ರೈಕ್ ಮಾಡದಿರಲು ರಷ್ಯಾ ನಿರ್ಧರಿಸಿದೆ.
ಕೆಲವು ವರದಿಗಳ ಪ್ರಕಾರ ಬೆಳಗ್ಗೆ 11.30 ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ರಷ್ಯಾ ಕದನ ವಿರಾಮ ಘೋಷಣೆ ಮಾಡಿದೆ ಅಂತಾ ಹೇಳಲಾಗುತ್ತಿದೆ. ರಷ್ಯಾದ ಯುದ್ಧ ಭೀಕರವಾಗುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರನ್ನ ಸುರಕ್ಷಿತ ಸ್ಥಳಕ್ಕೆ ಸೇರಿಸುವ ಉದ್ದೇಶದಿಂದ ಹ್ಯೂಮನ್ ಕಾರಿಡಾರ್ಗೆ ಉಕ್ರೇನ್ ಇಂದು ಮನವಿ ಮಾಡಿತ್ತು. ವೃದ್ಧರು, ಮಕ್ಕಳು, ಗರ್ಭಿಣಿಯರನ್ನ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಲು ಅವಕಾಶ ಮಾಡಿಕೊಡಿ ಎಂದು ಉಕ್ರೇನ್ ಕೋರಿಕೊಂಡಿತ್ತು.