ಪುತ್ತೂರು: ವಕೀಲರ ಸಂಘದ ಚುನಾವಣೆ ಇಂದು ನಡೆದಿದ್ದು, ಅಧ್ಯಕ್ಷರಾಗಿ ಮನೋಹರ್ ಕೆ.ವಿ ಅವರು ಪುನರಾಯ್ಕೆಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಕೃಷ್ಣಪ್ಪ ಗೌಡ ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ಚಿನ್ಮಯ್ ರೈ ಆಯ್ಕೆಗೊಂಡಿದ್ದಾರೆ.
ಜೊತೆ ಕಾರ್ಯದರ್ಶಿ ಸೀಮಾ ನಾಗರಾಜ್ ಆಯ್ಕೆಗೊಂಡಿದ್ದಾರೆ.
ಒಟ್ಟು 284 ಮತದಾರರಿದ್ದು 260 ಮತ ಚಲಾವಣೆ ಆಗಿದೆ. ಮುಖ್ಯ ಚುನಾವಣಾಧಿಕಾರಿಯಾಗಿ ಎನ್.ಕೆ.ಜಗನ್ನಿವಾಸ ರಾವ್ ಮತ್ತು ಚುನಾವಣಾಧಿಕಾರಿಯಾಗಿ ಫಝಲ್ ರಹಿಮ್ ಮತ್ತು ಶ್ಯಾಮ್ ಪ್ರಸಾದ್ ಕೈಲಾರ್ ಚುನಾವಣಾ ಪ್ರಕ್ರಿಯೆ ನಡೆಸಿ ಕೊಟ್ಟರು.