ಪುತ್ತೂರು: ಬನ್ನೂರು ತಂದೆಯ ಮನೆಯಲ್ಲಿ ವಾಸ್ತವ್ಯವಿದ್ದು 21 ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಬನ್ನೂರು ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರಿ ರೋಷ್ನಾ(38 ವ)ರವರು ನಾಪತ್ತೆಯಾಗಿದ್ದವರು. ರೋಷ್ನಾ ಅವರ ಗಂಡ ಝಿಯಾ ಉಲ್ ಹಕ್ ಅವರೊಂದಿಗೆ ತಕರಾರು ಉಂಟಾಗಿದ್ದ ಹಿನ್ನೆಲೆಯಲ್ಲಿ ಬನ್ನೂರಿನಲ್ಲಿರುವ ತಂದೆಯ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು.
ಫೆ.25ರಂದು ರೋಷ್ನಾ ಅವರು ಸುರಲ್ಪಾಡಿಯಲ್ಲಿರುವ ತನ್ನ ಮನೆಯನ್ನು ಸ್ವಚ್ಛಗೊಳಿಸಲು ಮತ್ತು ಕರೆಂಟ್ ಬಿಲ್ ಕಟ್ಟಿ ಬರುತ್ತೇನೆಂದು ಮಾರುತಿ ಆಲ್ಟೋ 800 ಕಾರಿನಲ್ಲಿ ಹೋದವರು ಬಳಿಕ ನಾಪತ್ತೆಯಾಗಿದ್ದರು. ಘಟನೆಯ ಕುರಿತು ಆಕೆಯ ತಂದೆ ಅಬ್ದುಲ್ ರಹಿಮಾನ್ ಅವರು ಪುತ್ರಿ ನಾಪತ್ತೆಯಾಗಿದ್ದಾರೆಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಹುಡುಕಾಟ ಪತ್ತೆಕಾರ್ಯ ನಡೆಸಿದ್ದು, ಮಾ.17ರಂದು ಮಂಗಳೂರಿನಲ್ಲಿ ರೋಷ್ನಾ ಅವರನ್ನು ಪತ್ತೆ ಮಾಡಿದ್ದಾರೆ.