ಒಣ ದ್ರಾಕ್ಷಿ ತುಂಬಾ ರುಚಿಕರ ಹಾಗೂ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಒಣ ದ್ರಾಕ್ಷಿಯನ್ನು ಹಲವಾರು ರೀತಿಯ ಸಿಹಿ ತಿಂಡಿಗಳು, ಐಸ್ ಕ್ರೀಮ್ ಇತ್ಯಾದಿಗಳಲ್ಲಿ ಹೆಚ್ಚಾಗಿ ಬಳಕೆ ಮಾಡುವರು.ಒಣ ದ್ರಾಕ್ಷಿ ನೀರು ತಯಾರಿಸುವುದು ಹೇಗೆ : ಒಣ ದ್ರಾಕ್ಷಿ ನೀರು ತಯಾರಿಸಲು ನೀವು ಎರಡು ಕಪ್ ನೀರು ಮತ್ತು 150 ಗ್ರಾಂ ಒಣ ದ್ರಾಕ್ಷಿ ತೆಗೆದುಕೊಳ್ಳಿ. ಒಂದು ಪಾತ್ರೆಗೆ ನೀರು ಹಾಕಿ ಮತ್ತು ಅದನ್ನು ಸರಿಯಾಗಿ ಕುದಿಸಿ.ಬೆಂಕಿ ನಂದಿಸಿ ಇದಕ್ಕೆ ಒಣ ದ್ರಾಕ್ಷಿ ಹಾಕಿ ಮತ್ತು ಅದು ರಾತ್ರಿಯಿಡಿ ನೆನೆಯಲು ಬಿಡಿ. ಬೆಳಗ್ಗೆ ಇದನ್ನು ಸೋಸಿಕೊಳ್ಳಿ ಮತ್ತು ನೀರನ್ನು ಸ್ವಲ್ಪ ಬಿಸಿ ಮಾಡಿ.ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಿರಿ. ಮುಂದಿನ 30 ನಿಮಿಷ ಕಾಲ ನೀವು ಏನೂ ಸೇವನೆ ಮಾಡಬೇಡಿ. ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುವುದು.
ಒಣ ದ್ರಾಕ್ಷಿ ನೀರು ಕುಡಿದರೆ ಸಿಗುವ ಲಾಭಗಳ ಬಗ್ಗೆ ನೋಡೋಣ: ಯಕೃತ್ ನ್ನು ನಿರ್ವಿಷಗೊಳಿಸುವುದು: ಇದು ದೇಹದಲ್ಲಿ ಇರುವ ಹಾನಿಕಾರಕ ವಿಷಕಾರಿ ಅಂಶಗಳನ್ನು ದೂರ ಮಾಡುವುದು. ಈ ನೀರು ಯಕೃತ್ ನ ಬಯೋಕೆಮಿಕಲ್ ಪ್ರಕ್ರಿಯೆಯನ್ನು ಸುಧಾರಣೆ ಮಾಡುವುದು ಮತ್ತು ರಕ್ತವನ್ನು ಶುದ್ಧೀಕರಿಸುವುದು. ಇದು ಯಕೃತ್ ನ್ನು ನಿರ್ವಿಷಗೊಳಿಸಲು ತುಂಬಾ ಒಳ್ಳೆಯದು.
ಹೊಟ್ಟೆಯಲ್ಲಿ ಆಮ್ಲವನ್ನು ನಿಯಂತ್ರಿಸುವುದು : ಅಸಿಡಿಟಿ ಸಮಸ್ಯೆಯನ್ನು ಎದುರಿಸುತ್ತಿರುವವರು ಯಾವಾಗಲೂ ದ್ರಾಕ್ಷಿ ನೀರನ್ನು ಕುಡಿಯಬೇಕು. ಇದು ಹೊಟ್ಟೆಯಲ್ಲಿ ಆಮ್ಲವನ್ನು ನಿಯಂತ್ರಣದಲ್ಲಿ ಇಡುವುದು.
ಪ್ರತಿರೋಧಕ ಶಕ್ತಿ ವೃದ್ಧಿ : ದ್ರಾಕ್ಷಿ ನೀರಿನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಂಶವು ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು. ಕೊರೊನಾವು ಮತ್ತೆ ಕೇಕೆ ಹಾಕಲು ಆರಂಭಿಸಿರುವ ಕಾರಣದಿಂದಾಗಿ ಪ್ರತಿರೋಧಕ ಶಕ್ತಿಯು ಪ್ರಬಲವಾಗಿ ಇರಬೇಕು. ನಿಮ್ಮ ಆಹಾರ ಕ್ರಮದಲ್ಲಿ ದ್ರಾಕ್ಷಿ ನೀರನ್ನು ಸೇರಿಸಿಕೊಂಡರೆ ಆಗ ವೈರಸ್ ನ್ನು ದೂರ ಮಾಡಬಹುದು.
ಹೃದಯದ ಆರೋಗ್ಯ ಕಾಪಾಡುವುದು : ಒಣ ದ್ರಾಕ್ಷಿಯ ನೀರು ರಕ್ತವನ್ನು ಶುದ್ಧೀಕರಿಸುವುದು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಲು ಇದು ತುಂಬಾ ಸಹಕಾರಿ.ಇದು ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ನ್ನು ತೆಗೆಯುವುದು ಮತ್ತು ಹೃದಯದ ಆರೋಗ್ಯವನ್ನು ಸುಧಾರಣೆ ಮಾಡುವುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ದ್ರಾಕ್ಷಿ ನೀರು ಸೇವನೆ ಮಾಡಿದರೆ ಅದರಿಂದ ತೂಕ ಇಳಿಸಲು ಸಹಕಾರಿ ಆಗುವುದು. ತೂಕ ಇಳಿಸಲು ಸಹಕಾರಿ : ದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ಫ್ರಾಕ್ಟೋಸ್ ಮತ್ತು ಗ್ಲುಕೋಸ್ ಅಂಶವಿದ್ದು, ಇದು ದೇಹಕ್ಕೆ ಶಕ್ತಿ ಒದಗಿಸುವುದು. ಇದರಲ್ಲಿ ಇರುವಂತಹ ನಾರಿನಾಂಶವು ಹೊಟ್ಟೆ ತುಂಬಿರುವಂತೆ ಮಾಡುವುದು.