ನವದೆಹಲಿ: ಚೀನಾಗೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 21 ಲಕ್ಷ ನವಿಲು ಗರಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸುಮಾರು 2,565 ಕೆಜಿ ತೂಕದ ನವಿಲು ಗರಿಗಳನ್ನು ಐಸಿಡಿ ತುಘಲಕಾಬಾದ್‍ನಲ್ಲಿ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಇವುಗಳನ್ನು ಮೊದಲಿಗೆ ಆರೋಪಿಗಳು ಪಿವಿಸಿ ಪೈಪ್‍ಗಳೆಂದು ಎಂದು ತಿಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಕಂಟೇನರ್‍ನನ್ನು ತಡೆದ ಅಧಿಕಾರಿಗಳು 21 ಲಕ್ಷ ನವಿಲು ಗರಿಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ಅವುಗಳನ್ನು ಚೀನಾಗೆ ರಫ್ತು ಮಾಡುತ್ತಿದ್ದರು. ಅಲ್ಲದೆ ಇದು ಪಿವಿಸಿ ಪೈಪ್‍ಗಳೆಂದು ಸುಳ್ಳು ಹೇಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ತನಿಖೆ ವೇಳೆ ಔಷಧಿ ಉದ್ದೇಶಕ್ಕಾಗಿ ನವಿಲು ಗರಿಯ ಕಳ್ಳಸಾಗಣಿಕೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ವಶಪಡಿಸಿಕೊಂಡಿರುವ ನವಿಲು ಗರಿಗಳ ಒಟ್ಟು ಮೊತ್ತ 5.25 ಕೋಟಿ ಎಂದು ಅಂದಾಜಿಸಲಾಗಿದ್ದು, ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.