ಮಂಗಳೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ವತಿಯಿಂದ 220 ನವೀಕೃತಗೊಂಡ ನಾಕಬಂಧಿಗಳನ್ನು (barricades) ಮಂಗಳೂರು ನಗರ ಪೋಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು.
ಮಂಗಳೂರು ನಗರ ಪೋಲೀಸ್ ಕಮಿಷನರಾದ ಎನ್ ಶಶಿಕುಮಾರ್ ರವರು ಈ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ನಾಕಬಂಧಿಗಳನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದವರು ಉದಾರವಾಗಿ ನೀಡಿದ್ದಾರೆ.
ಇದು ಬ್ಯಾಂಕಿನವರಿಗೆ ಸಮಾಜದ ಬಗೆಗಿನ ಕಾಳಜಿಯನ್ನು ತೋರಿಸುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎ.ಜಿ.ಎಂ ಸತೀಶ್ ರೈ, ಡಿ.ಸಿ.ಪಿ ವಿನಯ್ ಗೋಂಕಾರ್, ಎ.ಸಿ.ಪಿ ನಟರಾಜ್ ಉಪಸ್ಥಿತರಿದ್ದರು.