ತಮಿಳಿನ ಖ್ಯಾತ ನಟ ವಿಶಾಲ್ ದೇವರ ಬಗ್ಗೆ ಅಪಾರ ನಂಬಿಕೆವುಳ್ಳವರು. ಅವರು ಯಾವ ಜಾತಿಯರು ಎಂದು ಈವರೆಗೂ ಅಭಿಮಾನಿಗಳು ಕೇಳದೇ ಆರಾಧಿಸುತ್ತಾ ಬಂದಿದ್ದಾರೆ. ಸದ್ಯ ವಿಶಾಲ್ ಮಾಡಿರುವ ಒಂದು ಟ್ವಿಟ್ ನಿಂದಾಗಿ ವಿಶಾಲ್ ಯಾವ ಧರ್ಮದವರು ಎಂದು ಹುಡುಕುತ್ತಿದ್ದಾರೆ ನೆಟ್ಟಿಗರು.
ವಿಶಾಲ್ ಅವರ ಸಹೋದರಿ ಐಶು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯನ್ನು ಅಭಿಮಾನಿಗಳ ಜತೆ ಹಂಚಿಕೊಂಡಿರುವ ಅವರು, ‘ನಾನು ಮತ್ತೆ ಅಂಕಲ್ ಆಗಿರುವೆ. ಮತ್ತೊಮ್ಮೆ ಅಂಕಲ್ ಆಗಿರುವುದು ಸಂಭ್ರಮ ತಂದಿದೆ. ನನ್ನ ಸಹೋದರಿ ಐಶು ಅವರು ರಾಜಕುಮಾರಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಮತ್ತು ಸಹೋದರಿಗೂ ಶುಭ ಹಾರೈಸಿ. ಇಬ್ಬರಿಗೂ ಇನ್ಶ್ಯಾ ಅಲ್ಲಾಹ್ ನ ಆಶೀರ್ವಾದವಿರಲಿ’ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ‘ಇನ್ಶ್ಯಾ ಅಲ್ಲಾಹ್’ ಎಂಬ ಪದವೇ ಇದೀಗ ಚರ್ಚೆಗೆ ಕಾರಣವಾಗಿದೆ.
ಅಲ್ಲಾಹ್ ದೇವರ ಆಶೀರ್ವಾದ ಕೋರಿರುವ ವಿಶಾಲ್ ಹಾಗಾದರೆ, ಇಸ್ಲಾಂಗೆ ಮತಾಂತರ ಆಗಿದ್ದಾರಾ ಎಂದು ನೆಟ್ಟಿಗರು ಹಲವು ರೀತಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೂ ಇಂಥದ್ದೊಂದು ಪದವನ್ನು ಅವರು ಹಾಕಿರುವುದಾದರೂ ಏತಕ್ಕೆ ಎನ್ನುವ ಚರ್ಚೆ ಕೂಡ ತಮಿಳು ನಾಡಿನಲ್ಲಿ ನಡೆದಿದೆ. ಅದಕ್ಕೆ ವಿಶಾಲ್ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ಕೊಡಲು ಹೋಗಿಲ್ಲ.
ಸಮಾಜಮುಖಿ ಕಾರ್ಯಗಳಿಂದಾಗಿ ವಿಶಾಲ್ ಎಲ್ಲರ ಪ್ರೀತಿಯ ನಟರಾಗಿ ಉಳಿದುಕೊಂಡಿದ್ದಾರೆ. ಕನ್ನಡದ ಹೆಮ್ಮೆಯ ನಟ ಪುನೀತ್ ರಾಜ್ ಕುಮಾರ್ ನಿಧನರಾದಾಗ, ಅಪ್ಪು ನೋಡಿಕೊಳ್ಳುತ್ತಿದ್ದ ಅಷ್ಟೂ ಮಕ್ಕಳನ್ನು ದತ್ತು ಪಡೆದುಕೊಂಡು ಓದಿಸುತ್ತೇನೆ ಎಂದು ಹೇಳಿದ್ದರು. ಈ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೇ, ಪುನೀತ್ ಅವರ ಹೆಸರಿನಲ್ಲಿ ಅವರು ಗಿಡಗಳನ್ನು ನೆಟ್ಟು, ಪುನೀತ್ ಅಭಿಮಾನಿಗಳ ಪ್ರೀತಿಗೂ ವಿಶಾಲ್ ಪಾತ್ರರಾಗಿದ್ದರು.
Well wat more can I ask.
— Vishal (@VishalKOfficial) April 13, 2022
Supa happy to become an uncle again. The princess is born today to my princess darling sister aishu.
May god bless the new born girl and the couple.
Inshaallah. God bless. 🙏🙏🙏🙏