ಬೆಳ್ತಂಗಡಿ: ಆಲ್ಕೋಹಾಲ್ ಎಂದು ಭಾವಿಸಿ ರಬ್ಬರ್ ಶೀಟ್ ಗೆ ಬಳಸುವ ಆಸಿಡ್ ಕುಡಿದು ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯದ ಹುಂಬಾಜೆಯ ಹೇರಲ್ ಎಂಬಲ್ಲಿ ನಡೆದಿದೆ.
ಮೃತನನ್ನು ಬಾಬು(62) ಎಂದು ಗುರುತಿಸಲಾಗಿದೆ.
ಬಾಬು ಅವರು ರಬ್ಬರ್ ಶೆಡ್ ಗೆ ಮದ್ಯ ಹಾಗೂ ಆಸಿಡ್ ಬಾಟಲಿ ತೆಗೆದುಕೊಂಡು ಹೋಗಿದ್ದು, ಒಂದೆಡೆ ಇಟ್ಟಿದ್ದರು. ಬಳಿಕ ಮದ್ಯದ ಬಾಟಲಿ ಎಂದು ಭಾವಿಸಿ ಆಸಿಡ್ ಬಾಟಲಿ ತೆಗೆದು ಕುಡಿದ್ದರು. ಇದರಿಂದ ಅಸ್ವಸ್ಥಗೊಂಡ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.
ಏ.18 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.