ಬಂಟ್ವಾಳ: ಬದಿಗುಡ್ಡೆ ವಾರಾಟ ಮಾಡ ಶ್ರೀ ಅರಸು ಗುಡ್ಡೆಚಾಮುಂಡಿ, ಪ್ರಧಾನಿ ಪಂಜುರ್ಲಿ, ಬಂಟೆದಿ ಮಲೆಕೊರತಿ ದೈವಗಳ “ಕಾಲಾವಧಿ ವಲಸರಿ ನೇಮ” ಎ.28 ರಂದು ನಡೆಯಲಿದ್ದು, ಈ ಪ್ರಯುಕ್ತ ಎ.21 ರಂದು ಗೊನೆ ಮುಹೂರ್ತ ನಡೆಯಲಿದೆ.
ಎ.28 ರಂದು ಬೆಳಿಗ್ಗೆ ಮಾಣಿಗುತ್ತಿನಿಂದ ದೈವದ ಭಂಡಾರ ಹೊರಟು, ಬದಿಗುಡ್ಡೆ ವಾರಾಟ ಮಾಡಕ್ಕೆ ಆಗಮಿಸಿ ಗಣಹೋಮ ನಡೆದು ಪ್ರತಿಷ್ಠಾ ದಿನಾಚರಣೆಯ ಸಲುವಾಗಿ ದೈವಗಳಿಗೆ ತಂಬಿಲ ಸೇವೆ, ಹೂವಿನ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಅರಸು ಗುಡ್ಡೆಚಾಮುಂಡಿ, ಪ್ರಧಾನಿ ಪಂಜುರ್ಲಿ, ಬಂಟೆದಿ ಮಲೆಕೊರತಿ ದೈವಗಳ ನೇಮೋತ್ಸವ ನಡೆಯಲಿದೆ.