ವಿಟ್ಲ: ಸ್ವಂತ ಟೈಲರ್ ಶಾಪ್ ನಲ್ಲೇ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದಲ್ಲಿ ನಡೆದಿದೆ.
ಸಾಗರ್ ಟೈಲರ್ಸ್ ನ ಲಕ್ಷ್ಮಣ ಗೌಡ(50) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಲಕ್ಷ್ಮಣ ಗೌಡ ನೀರಕಣಿ ನಿವಾಸಿಯಾಗಿದ್ದು, ಕಳೆದ ಸುಮಾರು ಇಪ್ಪತೈದು ವರ್ಷಗಳಿಂದ ಸಾಗರ್ ಟೈಲರ್ಸ್ ಮಾಲಿಕರಾಗಿದ್ದ ಇವರು ಟೈಲರಿಂಗ್ ವೃತ್ತಿಯಲ್ಲಿ ಸಾಕಷ್ಟು ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು.
ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ..
