ಮುಕ್ಕೂರು: ಸಹಕಾರಿ ಕ್ಷೇತ್ರದ ಸಾಧನೆಗಾಗಿ ರಾಜ್ಯ ಸರಕಾರದ ಪ್ರತಿಷ್ಠಿತ ಸಹಕಾರಿ ರತ್ನ ಪ್ರಶಸ್ತಿ ಪಡೆದ ಹಿರಿಯ ಸಹಕಾರಿ ಧುರೀಣ ಸವಣೂರು ಸೀತಾರಾಮ ರೈ ಅವರನ್ನು ಪೆರುವಾಜೆ ಗ್ರಾಮದ ಆಳ್ವಫಾರ್ಮ್ಸ್ ನಲ್ಲಿ ಎ.21 ರಂದು ಗೌರವಿಸಿ ಸಮ್ಮಾನಿಸಲಾಯಿತು.
ಆಳ್ವಫಾರ್ಮ್ಸ್ ನ ಲಲಿತಾ ಎಸ್ ಆಳ್ವ ಅವರು ಸಮ್ಮಾನ ನೆರವೇರಿಸಿದರು. ಗೌರವ ಸ್ವೀಕರಿಸಿದ ಸೀತಾರಾಮ ರೈ ಸವಣೂರು ಮಾತನಾಡಿ, ಆಳ್ವಫಾರ್ಮ್ಸ್ ನ ಜತೆಗೆ ದೀರ್ಘಕಾಲದ ಒಡನಾಟ ಹೊಂದಿದ್ದೇನೆ. ಒಡನಾಡಿಯ ಮನೆಯಲ್ಲಿ ಗೌರವ ಸ್ವೀಕರಿಸುವುತ್ತಿರುವುದು ಸಂತಸ ತಂದಿದೆ ಎಂದರು.

ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ಕೇನ್ಯ, ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಹಿರಿಯರಾದ ರಾಮಯ್ಯ ರೈ ತಿಂಗಳಾಡಿ, ಚಿಕ್ಕಪ್ಪ ನ್ಯಾಕ್ ಅರಿಯಡ್ಕ, ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿಗಳಾದ ಬೋಳೋಡಿ ರಾಮಯ್ಯ ರೈ, ರಾಮದಾಸ ಅಡಪ, ಸುದೀಪ್ ದೇವಸ್ಯ, ಆಳ್ವಫಾರ್ಮ್ಸ್ ನ ದಿವಾಕರ ಆಳ್ವ, ಶಾಲಿನಿ ದಯಾಕರ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
ಪೃಥ್ವಿನ್ ಆಳ್ವ ಬೋಳೋಡಿ ಪ್ರಾರ್ಥಿಸಿದರು.ಆಳ್ವಫಾರ್ಮ್ಸ್ ನ ಕುಂಬ್ರ ದಯಾಕರ ಆಳ್ವ ಸ್ವಾಗತಿಸಿ, ಸೀತಾರಾಮ ರೈ ಸವಣೂರು ಅವರೊಂದಿಗಿನ ಒಡನಾಟ ಸ್ಮರಿಸಿದರು. ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಮನೋಹರ ಆಳ್ವ ವಂದಿಸಿದರು.