ಮಂಗಳೂರು: ಅಪ್ರಾಪ್ತ ಬಾಲಕಿಗೆ ಮೊಬೈಲ್ ನಂಬರ್ ನೀಡಿ, ಕರೆ ಮಾಡಿ ಮಾತನಾಡಿದ ಬಸ್ ನಿರ್ವಾಹಕನೋರ್ವನಿಗೆ ಬಾಲಕಿಯ ತಾಯಿ ಹಿಗ್ಗಾಮುಗ್ಗ ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಮಂಗಳೂರಿನಲ್ಲಿ 8ನೇ ತರಗತಿ ಓದುತ್ತಿರುವ ಬಾಲಕಿಯೋರ್ವಳು ಬಸ್‌ನಲ್ಲಿ ಸಂಚರಿಸುತ್ತಿದ್ದಾಗ ಮಾತನಾಡಿಸಿದ ಬಸ್ ನಿರ್ವಾಹಕ ಬಳಿಕ ಮೊಬೈಲ್ ನಂಬರ್‌ನ್ನು ಆಕೆಗೆ ನೀಡಿದ್ದಾನೆ ಎನ್ನಲಾಗಿದೆ.
ಬಳಿಕ ಬಾಲಕಿಯ ಮನೆಗೆ ಕರೆ ಮಾಡಿ ಬಾಲಕಿಯೊಂದಿಗೆ ಮಾತನಾಡಿ ಮನೆಯಲ್ಲಿ ಯಾರ್‍ಯಾರಿದ್ದಾರೆ ಎಂದು ಕೇಳಿದ್ದಾನೆ. ಇದರಿಂದ ಕೆರಳಿದ ಬಾಲಕಿಯ ತಾಯಿ ನಿರ್ವಾಹಕನನ್ನು ಭೇಟಿಯಾಗಿ ಆತನಿಗೆ ಹಿಗ್ಗಾಮಗ್ಗ ಥಳಿಸಿದ್ದಾಳೆ. ಬಾಲಕಿ ಒಂದೇ ಬಾರಿ ಈ ಬಸ್‌ನಲ್ಲಿ ಸಂಚರಿಸಿದ್ದು, ಆಗಲೇ ಮೊಬೈಲ್ ನಂಬರ್ ನೀಡಿದ್ದ ಎನ್ನಲಾಗಿದೆ.
ಬಸ್ ನಿರ್ವಾಹಕ ಈ ಮೊದಲು ಕೂಡ ಅದೇ ರೀತಿಯ ದುರ್ವರ್ತನೆ ತೋರಿದ್ದ ಎನ್ನಲಾಗಿದ್ದು, ಆದರೆ ಘಟನೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.