ಪುತ್ತೂರು: ಎಂಡೋ ಪೀಡಿತೆ ಬಾಲಕಿಯೋರ್ವಳು ಸಾವನ್ನಪ್ಪಿದ ಘಟನೆ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಎಂಬಲ್ಲಿ ನಡೆದಿದೆ.
ಜಿಡೆಕಲ್ಲು ನಿವಾಸಿ ಭರತ್ ಎಂಬವರ ಪುತ್ರಿ ಶ್ರದ್ಧಾ(7) ಎ.24 ರಂದು ನಿಧನರಾದರು.
ಹುಟ್ಟಿನಿಂದಲೇ ಮೆದುಳಿನ ಪಕ್ಷಪಾತ ಸೇರಿದಂತೆ, ವಿಕಲಚೇತನರಾಗಿದ್ದ ಶ್ರದ್ಧಾ ರನ್ನು ಎಂಡೋ ಪೀಡಿತರನ್ನಾಗಿ ಗುರುತಿಸಲಾಗಿತ್ತು.
ಎ.23 ರಂದು ರಾತ್ರಿ ವಿಕಲಚೇತನ ಮಗುವಿನ ಆರೋಗ್ಯದಲ್ಲಿ ಹಠಾತ್ ಏರುಪೇರಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕೊನೆಯುಸಿರೆಳೆದಿದೆ ಎಂದು ತಿಳಿದು ಬಂದಿದೆ.
ಮೃತರು ತಂದೆ ಭರತ್ ಮತ್ತು ಸುಜನಾ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.