ಕರಾವಳಿಯಲ್ಲಿ ಪ್ರಭಾವಿ ರಾಜಕೀಯ ಮುಖಂಡರೊಬ್ಬರು ರಾಸಲೀಲೆಯಲ್ಲಿ ತೊಡಗಿಸಿಕೊಂಡಿರುವ ವೀಡಿಯೊ ಒಂದು ರಿಲೀಸ್ ಆಗಿದೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಅದನ್ನು ವೈರಲ್ ಆಗದಂತೆ ತಡೆ ನೀಡಲಾಗಿದೆ ಎಂಬ ಸುದ್ದಿ ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದ್ದು, ಸತ್ಯಾಸತ್ಯತೆ ಶೀಘ್ರವೇ ಹೊರಬೀಳುವ ಸಂಭವವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇಂಥದೊಂದು ಗುಸು ಗುಸು ಹರಿಡಿದ್ದು ಮತ್ತು ಅದನ್ನು
ಹರಡಿಸಿದ್ದು ಯಾರು ಎಂಬುದು ತಿಳಿದಿಲ್ಲ.
ವಿಡಿಯೋ ಬಹಿರಂಗವಾಗದಂತೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದು, ಯಾವುದೇ ಕಾರಣಕ್ಕೂ ಯಾವುದೇ ಬೆಲೆ ತೆತ್ತಾದರೂ ವಿಡಿಯೋ ಬಹಿರಂಗವಾಗದಂತೆ ನೋಡಿಕೊಳ್ಳುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂಬ ಮಾಹಿತಿ ಪಕ್ಷದ ಮುಖಂಡರೋರ್ವರಿಂದ ಕೇಳಿ ಬಂದಿದೆ.
ರಾಸಲೀಲೆಯಲ್ಲಿ ಕಾಣಿಸಿಕೊಂಡ ಮಹಿಳೆ ಮಂಗಳೂರು
ಮೂಲದವರು ಎನ್ನಲಾಗಿದ್ದು, ಮಂಗಳೂರಿನ ಪ್ರಭಾವಿ
ರಾಜಕೀಯ ಮುಖಂಡ ಈ ವಿಚಾರವನ್ನು ರಾಜಿ ಮಾತುಕತೆ ಮೂಲಕ ತಾತ್ಕಾಲಿಕ ಪರಿಹಾರವನ್ನು ಸೂಚಿಸಿದ್ದಾರೆ ಎನ್ನಲಾಗಿದ್ದು ಈ ರಾಸಲೀಲೆಯ ಹಿಂದೆ ರಾಜಕೀಯ ಮುಖಂಡ ರಾಜಕೀಯವಾಗಿ
ಮುಗಿಸುವ ಷಡಂತ್ರವೂ ಇದೆ ಎಂಬ ಮಾತುಗಳೂ
ಕೇಳಿಬಂದಿದೆ.
ಎಲ್ಲರೊಂದಿಗೂ ಉತ್ತಮ ನಡವಳಿಕೆ ಹೊಂದಿರುವ ಮತ್ತು ಸಜ್ಜನ ರಾಜಕಾರಣಿಯಂದೇ ಪ್ರಚಾರವನ್ನು ಪಡೆದ ಜಿಲ್ಲೆಯ ಪ್ರಮುಖ ರಾಜಕಾರಣಿಯನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ಕಳೆದ ಹಲವು ತಿಂಗಳಿಂದ ತೆರೆಮರೆಯಲ್ಲಿ ನಡೆಯುತ್ತಿರುವುದರ
ಮುಂದುವರೆದ ಭಾಗವಾಗಿ ಅವರನ್ನು ರಾಸಲೀಲೆಯ
ಬಲೆಯಲ್ಲಿ ಹೆಣೆಯಲಾಗಿದೆ ಎಂಬ ಗುಸುಗುಸು ಹರಡಿದೆ.
ಇದು ಸತ್ಯವೇ ಆದಲ್ಲಿ ಜಿಲ್ಲೆಯ ರಾಜಕೀಯ ಚಿತ್ರಣವೇ
ಬದಲಾಗಲಿದೆ. ಪ್ರಕರಣ ಸತ್ಯಾಸತ್ಯತೆ ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ..