ಸುಳ್ಯ: ಹಗ್ಗಜಗ್ಗಾಟ ಸ್ಫರ್ಧೆಯಲ್ಲಿ ನಿಯಮ-ನಿಬಂಧನೆಗಳ ವಿಚಾರವಾಗಿ ಎರಡು ಬಣಗಳ ನಡುವೆ ವಾಗ್ವಾದ ನಡೆದು ವಿಕೋಪಕ್ಕೆ ತಿರುಗಿದ ಪರಿಣಾಮ ಹಗ್ಗವನ್ನು ಬಿಟ್ಟು ಪರಸ್ಪರ ಬಡಿದಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ನಡೆದಿದೆ. ಈ ಘಟನೆಯ ಬಗ್ಗೆ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅರಂತೋಡು ವಾಹನ ಚಾಲಕ-ಮಾಲಕರ ಸಂಘದ ನೇತೃತ್ವದಲ್ಲಿ ಅರಂತೋಡಿನ ಸ.ಹಿ.ಪ್ರಾ. ಶಾಲೆಯ ಕ್ರೀಡಾಂಗಣದಲ್ಲಿ ಹಗ್ಗಜಗ್ಗಾಟ ಸ್ಪರ್ಧೆ ಆಯೋಜಿಸಿದ್ದರು.
ಈ ಸಂದರ್ಭ ಸ್ಪರ್ಧೆಯ ಆಟದ ನಿಯಮಗಳ ಬಗ್ಗೆ ಇತ್ತಂಡದ ಮಧ್ಯೆ ಚರ್ಚೆ ಶುರುವಾಗಿದೆ. ಬಳಿಕ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದ ಮರು ಕ್ಷಣವೇ ಪರಸ್ಪರ ಬಡಿದಾಡಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ಲಭಿಸಿಲ್ಲ. ಸದ್ಯ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಭಾರೀ ವೈರಲ್ ಆಗುತ್ತಿದೆ.