ಕಡಬ: ಅಂಗಡಿಯೊಂದರ ಶಟರ್ ಮುರಿದು ಅಂಗಡಿಯೊಳಗಿದ್ದ ಹಣವನ್ನು ದೋಚಿದ ಘಟನೆ ಕಡಬ ಸಮೀಪದ ಕಳಾರ ಎಂಬಲ್ಲಿ ಎ.27 ರ ರಾತ್ರಿ ನಡೆದಿದೆ.
ಇಸ್ಮಾಯಿಲ್ ಬಿ.ಡಿ.ಎಸ್. ಎಂಬವರ ಅಂಗಡಿಗೆ ನುಗ್ಗಿದ ಕಳ್ಳರು ಒಟ್ಟು ನಾಲ್ಕೂವರೆ ಲಕ್ಷ ರೂ. ಗಳನ್ನು ದೋಚಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಕಡಬ ಠಾಣಾ ಎಸ್.ಐ. ಆಂಜನೇಯ ರೆಡ್ಡಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.