ಬೆಂಗಳೂರು: ಸೂರ್ಯನ ಕೆಂಗಣ್ಣಿಗೆ ಜನ ನಿಂತಲ್ಲೇ ಬೇವರುತ್ತಿದ್ದಾರೆ. ಜಮ್ಮು ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೂ ಬೇಸಿಗೆಯ ಹಗೆ ಆವರಿಸಿಕೊಂಡಿದೆ.
ರಣ ಬಿಸಿಲಿನ ಹೊಡೆತಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಭಾಸ್ಕರನ ಬೆಂಕಿಯ ಅವತಾರ ತಾಳಲಾಗ್ತಿಲ್ಲ. ಬರೋಬ್ಬರಿ 122 ವರ್ಷಗಳ ದಾಖಲೆಯ ಬಿಸಿಲು ಭಾರತದಲ್ಲಿ ದಾಖಲಾಗಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಬಿಸಿಲ ಬೇಗೆ.. ನಿಗಿ ನಿಗಿ ಕೆಂಡದಂತ ಬಿಸಿಲಿನ ಮೂಲಕ ನೆತ್ತಿ ಸುಡುತ್ತಿರುವ ಭಾಸ್ಕರ.. ಇದ್ರ ಮಧ್ಯೆ ಎಷ್ಟು ನೀರು ಕುಡಿದ್ರೂ ನೀಗದ ದಾಹ.. ಉತ್ತರ ಭಾರತ ಅಕ್ಷರಶಃ ರಣಬಿಸಿಲಿಗೆ ತತ್ತರಿಸಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಕಾರಿನ ಬಾನೆಟ್ ಮೇಲೆ ಚಪಾತಿ ಮಾಡುವಷ್ಟು ಸೂರ್ಯನ ಕೆಂಗಣ್ಣಿಗೆ ಹಲವು ರಾಜ್ಯಗಳು ಕಾದ ಬಾಣಲೆಯಂತಾಗಿವೆ.
ಮನೆಯಲ್ಲಿದ್ರೆ ಸೆಕೆ, ಹೊರಗೆ ಕಾಲಿಟ್ರೆ ಬಿಸಿಗಾಳಿ ಜನರನ್ನ ಹಿಂಡಿ ಹಿಪ್ಪೆ ಮಾಡ್ತಿದೆ. ಭಾರತ ಹಿಂದೆಂದು ಕಾಣದ ತಾಪಮಾನ ದಾಖಲಾಗಿದೆ.
ಉತ್ತರ ಭಾರತದಲ್ಲಿ ಉಷ್ಣಾಂಶ ತೀವ್ರವಾಗಿ ಏರಿಕೆಯಾಗುತ್ತಿದ್ದು, ಸುಮಾರು 45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗ್ತಿದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆಯು ಉತ್ತರ ಭಾರತದ ರಾಜಸ್ಥಾನ, ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಒಡಿಶಾ ರಾಜ್ಯಗಳಿಗೆ ಉಷ್ಣ ಅಲೆಯ ಆರೆಂಜ್ ಅಲರ್ಟ್ ಘೋಷಿಸಿದೆ. ಇದು ಮುಂದಿನ ಮೂರು ದಿನಗಳಲ್ಲಿ ಸುಮಾರು 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಬಹುದು ಅಂತ ಎಚ್ಚರಿಕೆ ನೀಡಿದೆ.
ಎಲ್ಲೆಲ್ಲಿ ಎಷ್ಟು ಉಷ್ಣಾಂಶ ದಾಖಲಾಗಿದೆ..?
- ನವದೆಹಲಿ (ಸಪ್ಲರ್‌ಜಂಗ್) 43.5 C
- ರಾಜಸ್ಥಾನ (ಬನ್‌ಸ್ಟಾರಾ) 45.5 C
- ಮಧ್ಯ ಪ್ರದೇಶ (ಖಜುರಾಹೊ) 45.6 C
- ಉತ್ತರ ಪ್ರದೇಶ (ಪ್ರಯಾಗ್ ರಾಜ್) 45.9 C
- ಹರ್ಯಾಣ (ಗುರುಗ್ರಾಮ) 45.6 C
- ಓಡಿಶಾ (ಸುಬರ್ನಪುರ) 44.5 C ಉಷ್ಣಾಂಶ ದಾಖಲಾಗಿದೆ.
ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ವಿದ್ಯುತ್ ಬೇಡಿಕೆಯಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ. ರಾಜಸ್ಥಾನವು ಕಾರ್ಖಾನೆಗಳಲ್ಲಿ ನಾಲ್ಕು ಗಂಟೆ ವಿದ್ಯುತ್ ಕಡಿತ ನಿಗದಿಪಡಿಸಲಾಗಿದೆ. ತೀವ್ರ ಉಷ್ಣಾಂಶದ ಕಾರಣ ಪಶ್ಚಿಮ ಬಂಗಾಳವು ಶಿಕ್ಷಣ ಸಂಸ್ಥೆಗಳಿಗೆ ಬೇಸಿಗೆಯ ಆರಂಭದಲ್ಲಿ ರಜೆಯನ್ನು ಘೋಷಿಸಿದೆ. ಒಡಿಶಾದಲ್ಲೂ ಸೂರ್ಯ ನೆತ್ತಿ ಸುಡುತ್ತಿದ್ದು, ಮಹಿಳೆಯರು ಕಾರ್‌ನ ಬಾನೆಟ್ ಮೇಲೇ ಚಪಾತಿ ಮಾಡುತ್ತಿದ್ದಾರೆ. ದೇಶದಲ್ಲಿ ಉಷ್ಣಾಂಶ ಅದೆಷ್ಟರ ಮಟ್ಟಿಗೆ ಹೆಚ್ಚಾಗಿದೆ ಅಂದ್ರೆ ಕೂಲೆಸ್ಟ್ ರಾಜ್ಯ ಜಮ್ಮು ಕಾಶ್ಮೀರದಲ್ಲೂ 40 ಡಿಗ್ರಿ ತಾಪಮಾನ ದಾಖಲಾಗಿದೆ. ಒಟ್ಟಾರೆಯಾಗಿ ಸೂರ್ಯನ ಶಾಖ ಮನುಷ್ಯನ ಬೆವರಿಳಿಸಿದೆ.