ಈಶ್ವರಮಂಗಲ: ಹಿರಿಯ ಕಾಂಗ್ರೆಸ್ ಮುಖಂಡ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಮೋಕ್ತೆಸರರಾದ ವಿಶ್ವನಾಥ ಶೆಟ್ಟಿ(ಮಿತ್ತೂರು ಬಾಬಣ್ಣ) ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಮೇ.1 ರಂದು ನಿಧನರಾದರು.

ವಿಶ್ವನಾಥ ಶೆಟ್ಟಿ ರವರು ಕರ್ನೂರು ಗುತ್ತು ದಿ. ನಾರಾಯಣ ಶೆಟ್ಟಿ, ಮೇನಾಲ ಶಿವಮ್ಮ ಶೆಟ್ಟಿ ದಂಪತಿಗಳ ಹಿರಿಯ ಪುತ್ರರಾಗಿದ್ದು, ಕಾಂಗ್ರೆಸ್ ನ ಹಿರಿಯ ಮುಖಂಡರಾಗಿದ್ದಾರೆ.
ಮುಡ್ನೂರು ಮಂಡಲ ಪಂಚಾಯತ್ ನ ಮಾಜಿ ಅಧ್ಯಕ್ಷರೂ ಆಗಿದ್ದು, ಹಲವು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳ ಮುಂದಾಳತ್ವವನ್ನು ವಹಿಸಿದ್ದರು.
ಮೃತರು ಕುಟುಂಬಸ್ಥರು ಮತ್ತು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.