ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಪ್ಲೇ ಆಫ್ ಕನಸು ಗಟ್ಟಿ ಮಾಡಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತವಾಗಿಯೇ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿದೆ. ಇದೇ ವೇಳೆ ಆರ್ಸಿಬಿ ಜೆರ್ಸಿ ತೊಟ್ಟ ಗೆಳೆಯನಿಗೆ ಯುವತಿಯೊಬ್ಬಳು ಪ್ರಪೋಸ್ ಮಾಡಿದ ವಿಡಿಯೋ ಸಖತ್ ವೈರಲ್ ಆಗಿದೆ.

ಹೌದು, ನಿನ್ನೆಯ ಪಂದ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ-ಸಿಎಸ್ಕೆ ನಡುವಿನ ಪಂದ್ಯದ ವೇಳೆ ಯುವತಿ ಗೆಳೆಯನಿಗೆ ಪ್ರಪೋಸ್ ಮಾಡಿದ್ದು, ಕ್ಯಾಮೆರಾ ಮ್ಯಾನ್ ಈ ದೃಶ್ಯಗಳನ್ನು ಬಿಗ್ ಸ್ಕ್ರೀನ್ನಲ್ಲಿ ತೋರಿಸಿದ್ದರು.
ಆರ್ಸಿಬಿ ಇನ್ನಿಂಗ್ಸ್ನಲ್ಲಿ ವೇಳೆ ಡೆವೋನ್ ಕಾನ್ವೆ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಯುವಕನೊಬ್ಬ ಆರ್ಸಿಬಿ ಜೆರ್ಸಿ ತೊಟ್ಟು ನಿಂತಿದ್ದ. ಈ ವೇಳೆ ಯುವತಿಯೊಬ್ಬಳು ತನ್ನ ಗೆಳೆಯನಿಗೆ ಮಂಡಿಯೂರಿ ಲವ್ ಪ್ರಪೋಸ್ ಮಾಡಿದ್ದಾಳೆ. ಪ್ರಪೋಸ್ ಮಾಡಿದ ಯುವತಿ ಗೆಳೆಯನಿಗೆ ರಿಂಗ್ ಕೂಡ ತೊಡಿಸಿದಳು. ಈ ವೇಳೆ ಕ್ಯಾಮೆರಾಮೆನ್ ಕೂಡ ಇಬ್ಬರ ಚಿತ್ರವನ್ನು ಸೆರೆಹಿಡಿಯುತ್ತಿದ್ದಂತೆ ಮೈದಾನದಲ್ಲಿ ಹರ್ಷೋದ್ಗಾರ ಕೇಳಿಬಂದಿತ್ತು. ಅಲ್ಲದೇ ಕಾಮೆಂಟರಿ ಮಾಡುತ್ತಿದ್ದವರೂ ಕೂಡ ಈ ಪ್ರಸಂಗವನ್ನು ನೋಡಿ ಸಂತಸ ವ್ಯಕ್ತಪಡಿಸಿದರು. ಸದ್ಯಕ್ಕಂತೂ ಈ ಪ್ರೇಮಿಗಳ ಪ್ರಪೋಸ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ಆರ್ಸಿಬಿ ಅಭಿಮಾನಿಗಳು ಕೂಡ ಸಖತ್ ಖುಷಿಯಾಗಿದ್ದಾರೆ.

ಇನ್ನು, ಈ ಫೋಟೋ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ಮಾಜಿ ಆಟಗಾರ ವಾಸಿಂ ಜಾಫರ್, ‘ಬುದ್ಧಿವಂತ ಹುಡುಗಿ ಆರ್ಸಿಬಿ ಫ್ಯಾನ್ಗೆ ಪ್ರಪೋಸ್ ಮಾಡಿದ್ದಾಳೆ. ಆತ ಆರ್ಸಿಬಿಗೆ ನಿಷ್ಠನಾಗಿದ್ದರೆ ಖಂಡಿತ ಗೆಳತಿಯೊಂದಿಗೂ ನಿಷ್ಠನಾಗಿರುತ್ತಾನೆ. ಒಳ್ಳೆಯ ಕೆಲಸ.. ಪ್ರೇಮ ನಿವೇದನೆ ಮಾಡಲು ಒಳ್ಳೆಯ ದಿನ. ಶುಭವಾಗಲಿ ಅಂತ ಯುವ ಜೋಡಿಗೆ ಮೆಚ್ಚುಗೆ ನೀಡಿದ್ದಾರೆ.