ಉಪ್ಪಿನಂಗಡಿ: ‘ಶ್ರೀ ದುರ್ಗಾ ಫರ್ನಿಚರ್ಸ್ ಮತ್ತು ಹೋಂ ಎಪ್ಲಾಯನ್ಸಸ್’ ನ ನೂತನ ಮಳಿಗೆ ಮೇ.8 ರಂದು ಉಪ್ಪಿನಂಗಡಿ ಕೋಟೆ ರಸ್ತೆಯ ಪಶುವೈದ್ಯಕೀಯ ಆಸ್ಪತ್ರೆಯ ಬಳಿಯಲ್ಲಿ ಶುಭಾರಂಭಗೊಳ್ಳಲಿದೆ.
ನೂತನ ಮಳಿಗೆಯ ದೀಪ ಪ್ರಜ್ವಲನೆಯನ್ನು ಸುನಂದಾ ಶೆಟ್ಟಿ ಮತ್ತು ಸದಾನಂದ ಶೆಟ್ಟಿ ಹಾಗೂ ತಾರಾವತಿ ಶೆಟ್ಟಿ ಮತ್ತು ಗಣಪತಿ ಶೆಟ್ಟಿ ರವರು ನೆರವೇರಿಸಲಿದ್ದಾರೆ.
ಸಚಿವರಾದ ವಿ. ಸುನೀಲ್ ಕುಮಾರ್ ರವರು ನೂತನ ಮಳಿಗೆಯನ್ನು ಉದ್ಘಾಟನೆಗೊಳಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜಾ, ಪ್ರತಾಪಸಿಂಹ ನಾಯಕ್, ಹರೀಶ್ ಕುಮಾರ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರಾದ ಕರುಣಾಕರ ಸುವರ್ಣ, ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರಾದ ಅನಂತ್ರಾಯ ಕಿಣಿ, ಉದ್ಯಮಿಗಳಾದ ಧನ್ಯಕುಮಾರ್ ರೈ ಬಿಳಿಯೂರು ಗುತ್ತು, ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಶಾಂತ ಎಂ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ವಿನಾಯಕ ಪೈ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಯು.ಟಿ. ತೌಸೀಫ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ವಿಲ್ಪೆಡ್ ಲಾರೆನ್ಸ್ ರೊಡ್ರಿಗಸ್ ರವರು ಆಗಮಿಸಲಿದ್ದಾರೆ.