ಪುತ್ತೂರು : ಕರ್ನಾಟಕ ಸರಕಾರದ ಆಡಳಿತ ಮಂಡಳಿಯ ಅಧಿಕಾರಿಗಳಿಂದ ನಡೆಸಲ್ಪಡುವ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಆಶ್ರಮದಲ್ಲಿ ನಡೆಯುವ 47ನೇ ಜ್ಯೂನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್ ಶಿಪ್ ಪಂದ್ಯಾಟವು ಮಾ.22ರಿಂದ ಮಾ.25ರ ತನಕ ತೆಲಂಗಾಣದ ಎಸ್. ಪಿ ಗ್ರಾಂಡ್ ಸೂರ್ಯಪೇಟೆಯಲ್ಲಿ ನಡೆಯಲಿದ್ದು
ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ ಶಾಂತಿಗೋಡು ಗ್ರಾಮದ ಪಾದೆ ನಿವಾಸಿ ಶ್ರವಣ್ ಗೌಡ ಎಂ.ಪಿ ಇವರು ಪ್ರಸ್ತುತ ಮಂಗಳೂರು ವಿಕಾಸ್ ಕಾಲೇಜಿನ ಪದವಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇವರು ನರಿಮೊಗರು ಸಾಂದಿಪನಿ ಶಾಲೆಯ ಹಳೆ ವಿದ್ಯಾರ್ಥಿಯಾಗಿರುತ್ತಾರೆ.
ಇವರು ಶಾಂತಿಗೋಡು ಗ್ರಾಮದ ಪಾದೆ ನಿವಾಸಿ ಮೋಹನ ಗೌಡ ಮತ್ತು ಲತಾ ದಂಪತಿಯ ಪುತ್ರರಾಗಿರುತ್ತಾರೆ. ತರಬೇತುದಾರರಾದ ಮಂಗಳೂರಿನ ಆಕಾಶ್ ಶೆಟ್ಟಿ ಮತ್ತು ಪ್ರೇಮನಾಥ್ ಶೆಟ್ಟಿಯವರಿಂದ ತರಬೇತಿ ಪಡೆಯುತ್ತಿದ್ದಾರೆ.