ಪುತ್ತೂರು: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮೂವರು ವಿದ್ಯಾರ್ಥಿಗಳು ರಾಜ್ಯದ ಟಾಪ್ ಸ್ಥಾನದಲ್ಲಿದ್ದಾರೆ.
625 ರಲ್ಲಿ 625 ಅಂಕ ಪಡೆದಿರುವ ರಾಜ್ಯದ 145 ಮಂದಿ ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಪುತ್ತೂರಿನವರಾಗಿದ್ದಾರೆ.

ಆತ್ಮೀಯಾ ಎಂ.ಕಶ್ಯಪ್ (ಡಾ. ಮೋಹನ್. ಜಿ.ಎಸ್ ಮತ್ತು ಸೌಖ್ಯ. ಎಂ. ಎಸ್ ಇವರ ಪುತ್ರ ), ಅಭಯ್ ಶರ್ಮಾ ಕೆ. (ಗಿರೀಶಂಕರ್. ಕೆ ಮತ್ತು ವಿದ್ಯಾ. ಜಿ. ಭಟ್ ಇವರ ಪುತ್ರ), ಹಾಗೂ ಅಭಿಜ್ಞಾ ಆರ್. (ಡಾ.ರಾಜೇಶ್. ಎಂ. ಮತ್ತು ಛಾಯಾ ರಾಜೇಶ್ ಇವರ ಪುತ್ರಿ ) ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿರುವ ವಿದ್ಯಾರ್ಥಿಗಳಾಗಿದ್ದಾರೆ.