ಪುತ್ತೂರು: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಶೇ.100% ಫಲಿತಾಂಶವನ್ನು ಪಡೆದಿದೆ.
ಪರೀಕ್ಷೆಗೆ ಹಾಜರಾದ 111 ವಿದ್ಯಾರ್ಥಿಗಳ ಪೈಕಿ 61 ಜನ ವಿಶಿಷ್ಟ ಶ್ರೇಣಿಯಲ್ಲಿ, 42 ಜನ ಪ್ರಥಮ ದರ್ಜೆಯಲ್ಲಿ ಹಾಗೂ 8 ಜನ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸರಾಸರಿ 91.80% ಅನ್ನು ವಿದ್ಯಾಸಂಸ್ಥೆ ಪಡೆದುಕೊಂಡಿದೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಈ ಸಂಸ್ಥೆ ನೀಡುತ್ತಿದ್ದು, ಈ ಶಿಕ್ಷಣ ಸಂಸ್ಥೆಯ ಮೂಲಕ ಸಮಾಜಕ್ಕೆ ಹಲವಾರು ಉತ್ತಮ ವ್ಯಕ್ತಿಗಳನ್ನು ಪರಿಚಯಿಸಿದೆ.