ಕೊಪ್ಪಳ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಕ್ಕೆ ವಿದ್ಯಾರ್ಥಿಯೊಬ್ಬ ಮಳೆಯಲ್ಲಿಯೇ ಡಾನ್ಸ್ ಮಾಡಿದ ಘಟನೆ ಕೊಪ್ಪಳ ತಾಲೂಕಿನ ಕಾತರಕಿಯಲ್ಲಿ ನಡೆದಿದೆ.

ಶಿವಕುಮಾರ್ ಎಂಬ ವಿದ್ಯಾರ್ಥಿಗೆ ಪೋಷಕರು ನೀನು ಪರೀಕ್ಷೆಯಲ್ಲಿ ಪಾಸ್ ಆಗಲ್ಲ ಅಂತಾ ಹೇಳಿದ್ದರಂತೆ. ಆದ್ರೆ ಸದ್ಯ ಶಿವಕುಮಾರ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಈ ಖುಷಿಗೆ ಕುಣಿದು ಕುಪ್ಪಳಿಸಿದ್ದಾನೆ. ‘ನಾನ್ ಪಾಸ್ ಅದ್ನೋ’ ಅಂತಾ ಮಳೆಯಲ್ಲಿ ಕುಣಿದಾಡಿದ್ದಾನೆ.
2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇಖಡವಾರು 85.63ರಷ್ಟು ಫಲಿತಾಂಶ ಬಂದಿದೆ. ಇದು ಕಳೆದ 10 ವರ್ಷಗಳಲ್ಲಿ ದಾಖಲೆಯ ಫಲಿತಾಂಶವಾಗಿದೆ. 145 ವಿದ್ಯಾರ್ಥಿಗಳು ಔಟ್ ಆಫ್ ಔಟ್ ಪಡೆದುಕೊಂಡಿದ್ದಾರೆ. ಈ ಬಾರಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿಕೊಂಡಿದ್ದಾರೆ.