ಪುತ್ತೂರು: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎ.ಪಿ.ಎಂ.ಸಿ ರಸ್ತೆಯ ರೈಲ್ವೇ ಅಂಡರ್ ಪಾಸ್ ಗುದ್ದಲಿ ಪೂಜೆ ಕಾಮಗಾರಿ ಚಾಲನೆ ಮತ್ತು ನವೀಕೃತ ವಸತಿ ಗೃಹ ಉದ್ಘಾಟನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮೇ.21 ರಂದು ಎ.ಪಿ.ಎಂ.ಸಿ.ಯಲ್ಲಿ ನಡೆಯಲಿದೆ.
ರೈಲ್ವೇ ಅಂಡರ್ ಪಾಸ್ ಗುದ್ದಲಿ ಪೂಜೆಯನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ನೆರವೇರಿಸಲಿದ್ದಾರೆ. ಕಾಮಗಾರಿಗಳಿಗೆ ಚಾಲನೆಯನ್ನು ಸಂಸದರು, ಮಾಜಿ ಮುಖ್ಯಮಂತ್ರಿಗಳಾದ ಡಿ. ವಿ. ಸದಾನಂದ ಗೌಡ ನೀಡಲಿದ್ದಾರೆ.
ನಾಮ ಫಲಕ ಅನಾವರಣವನ್ನು ಸಚಿವರಾದ ಸುನೀಲ್ ಕುಮಾರ್ ರವರು ಮಾಡಲಿದ್ದಾರೆ. ಸಭಾಧ್ಯಕ್ಷತೆಯನ್ನು ಶಾಸಕರಾದ ಸಂಜೀವ ಮಠಂದೂರು ರವರು ವಹಿಸಲಿದ್ದಾರೆ.
ಅತಿಥಿ ಗೃಹ ಉದ್ಘಾಟನೆಯನ್ನು ಸಹಕಾರ ಸಚಿವರಾದ ಎಸ್. ಟಿ. ಸೋಮಶೇಖರ್ ರವರು ನೆರವೇರಿಸಲಿದ್ದಾರೆ. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಸ್. ಅಂಗಾರ ರವರು ನೆರವೇರಿಸಲಿದ್ದಾರೆ. ಸನ್ಮಾನ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ರವರು ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಹರೀಶ್ ಕುಮಾರ್, ಎಸ್. ಎಲ್. ಬೋಜೇ ಗೌಡ, ಮಂಜುನಾಥ ಭಂಡಾರಿ, ನಗರ ಸಭೆ ಅಧ್ಯಕ್ಷರಾದ ಜೀವಂಧರ್ ಜೈನ್, ರೈಲ್ವೇ ಡಿ. ಆರ್.ಎಂ. ರಾಹುಲ್, ಕೃಷಿ ಮಾರಾಟ ಇಲಾಖೆ ನಿರ್ದೇಶಕರಾದ ಯೋಗೀಶ್ ಎ.ಎಂ., ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ., ಪುಡಾ ಅಧ್ಯಕ್ಷರಾದ ಭಾಮಿ ಅಶೋಕ್ ಶೆಣೈ, ಅಡಿಕೆ ವರ್ತಕರ ಸಂಘದ ಅಧ್ಯಕ್ಷರಾದ ರವೀಂದ್ರನಾಥ ರೈ ಬಳ್ಳಮಜಲು ರವರು ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಹಾಲಿಂಗ ನಾಯ್ಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಕೆ. ಸೀತಾರಾಮ ರೈ ಸವಣೂರು, ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಪ್ರಶಾಂತ್ ರೈ. ಕೈಕಾರ, ಕೃಷಿ ಸಾಹಸಿ ಲಕ್ಷ್ಮೀ ಎರ್ಕಮನೆ ರವರು ವಿಶೇಷ ಸನ್ಮಾನ ಗೌರವವನ್ನು ಸ್ವೀಕರಿಸಲಿದ್ದಾರೆ.
