ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಇವರ ವತಿಯಿಂದ ಮೇ 20ರಿಂದ 22 ರ ವರೆಗೆ ಚೆನ್ನೈಯ ತಮಿಳುನಾಡಿನಲ್ಲಿ ನಡೆಯುವ 22ನೇ ರಾಷ್ಟ್ರೀಯ ಬೀಚ್ ವಾಲಿಬಾಲ್ ಚಾಂಪಿಯನ್ಶಿಪ್ ಗೆ ಕರ್ನಾಟಕದಿಂದ ಎರಡು ಪುರುಷರ ತಂಡ ಮತ್ತು ಎರಡು ಮಹಿಳೆಯರ ತಂಡ ಭಾಗವಹಿಸಲಿದೆ.

ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ ಇದರ ಕನ್ವೀನರ್ ಅಂತೋನಿ ಜೋಸೆಫ್ ಇವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ತಂಡವು ಭಾಗವಹಿಸಲಿದೆ.

ಕರ್ನಾಟಕ ರಾಜ್ಯದ ಹಿರಿಯ ಎನ್ ಐ ಎಸ್ ಕೋಚ್ ಮತ್ತು ಭಾರತೀಯ ಬೀಚ್ ವಾಲಿಬಾಲ್ ಸ್ಥಾಪಕ ಸದಸ್ಯರಾದ ಪಿವಿ ನಾರಾಯಣನ್ ರವರನ್ನು ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯ ರಾಷ್ಟ್ರೀಯ ಬೀಚ್ ವಾಲಿಬಾಲ್ ಟೆಕ್ನಿಕಲ್ ಸಮಿತಿಯ ಸದಸ್ಯರಾಗಿ ನೇಮಕ ಮಾಡಿರುತ್ತಾರೆ. ಮತ್ತು ರಾಜ್ಯ ಯುವ ಪ್ರಶಸ್ತಿ ವಿಜೇತರು ಹಾಗೂ ಕ್ರೀಡಾ ಪ್ರೋತ್ಸಾಹಕರಾದ ಬಸವರಾಜ್ ಹೊಸಮಟ್ ರಾಜ್ಯ ತಂಡದೊಂದಿಗೆ ತಮಿಳುನಾಡಿಗೆ ತೆರಳಲಿದ್ದಾರೆ ಎಂದು ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಇದರ ಸದಸ್ಯ ಇಬ್ರಾಹಿಂ ಗೋಳಿಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.