ಬಂಟ್ವಾಳ: ದಾರಿ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಯಾರೋ ಕಿಡಿಗೇಡಿಗಳು ಪೆಟ್ರೋಲ್ ಹಾಕಿ ಸುಟ್ಟ ಘಟನೆ ಸಜೀಪಮುನ್ನೂರಿನ ಮಿತ್ತಕಟ್ಟದಲ್ಲಿ ನಡೆದಿದೆ.
ಮಿತ್ತಕಟ್ಟ ನಿವಾಸಿ ಗೌತಮ್ ಅವರಿಗೆ ಸೇರಿದ ವಾಹನ ಇದಾಗಿದ್ದು, ಅವರು ರಾತ್ರಿ ತಮ್ಮ ಮನೆಯ ಸಮೀಪ ರಸ್ತೆ ಬದಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಮನೆಗೆ ತೆರಳಿದ್ದರು.

ಬೆಳಗ್ಗೆ ಹಾಲಿನ ಡೈರಿಗೆ ಹಾಲು ಹಾಕುವುದಕ್ಕೆ ವಾಹನದ ಬಳಿಗೆ ಬಂದಾಗ ದ್ವಿಚಕ್ರ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದ್ದು 20000 ರೂ ನಷ್ಟ ಸಂಭವಿಸಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.