ಪುತ್ತೂರು: ಭಾರತೀಯ ಜನತಾ ಪಾರ್ಟಿ ಅಧಿಕಾರ ಉಳಿಸಿಕೊಳ್ಳುವ ಕಾರಣಕ್ಕಾಗಿ ಕೋಮುವಾದವನ್ನು ಪ್ರಮುಖ ಅಸ್ತ್ರವನ್ನಾಗೀ ಮಾಡಿಕೊಂಡು ಆ ಮೂಲಕ ಧಾರ್ಮಿಕ ದೃಡೀಕರಣ, ಹಿಜಾಬ್, ಹಲಾಲ್, ಜಟ್ಕಾಕಟ್, ಮಂದಿರ, ಆಜಾನ್, ವ್ಯಾಪಾರ ಬಹಿಷ್ಕಾರ, ಇವುಗಳನ್ನು ಮುಂದಿಡುತ್ತಿದ್ದಾರೆ. ಗೋ ಮಾತೆ ಹೆಸರಲ್ಲಿ ಗೋ ಮಾಂಸವನ್ನು ರಫ್ತು ಮಾಡುವುದರಲ್ಲಿ ಬಿಜೆಪಿಗರೆ ಮೊದಲಿಗರಾಗಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಬಿ ವಿಶ್ವನಾಥ್ ರೈ ರವರು ಆರೋಪಿಸಿದರು.
ಅವರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಬಜರಂಗದಳದವರು ಶಾಲಾ ಆವರಣದಲ್ಲಿ ತ್ರಿಶೂಲ ದೀಕ್ಷೆ ಮತ್ತು ನಿರ್ಜನ ಪ್ರದೇಶದಲ್ಲಿ ಬಂದೂಕು ತರಬೇತಿ ಕಾರ್ಯಕ್ರಮವನ್ನು ನಡೆಸಿದ್ದಾರೆ. ಪರವಾನಿಗೆ ಇಲ್ಲದೆ ಬಂದೂಕು ತರಬೇತಿ ಕಾರ್ಯಕ್ರಮ ಮಾಡುವುದು ಅಪರಾಧ ಮತ್ತು ಕಾನೂನು ವಿರೋಧವಾಗಿದೆ. ತ್ರಿಶೂಲ ಕೂಡ ಮಾರಾಕಾಸ್ತ್ರಗಳಲ್ಲಿ ಒಂದಾಗಿದೆ. ಹಿಜಾಬ್ ಪ್ರಕರಣದ ನಂತರ ಕೋರ್ಟ್ ಆದೇಶ ನೀಡಿದ ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳು ಮತ್ತು ಧಾರ್ಮಿಕ ಕುರುಹುಗಳುಲ್ಲ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಮಾಡಬಾರದು ಎಂದು ನಿರ್ಬಂಧವನ್ನು ಹೇರಿದೆ ಆದರೇ, ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ಗಣಹೋಮ ಮತ್ತು ಆರತಿ ಬೆಳಗಿಸಿ ಕುಂಕುಮವಿಡುವುದರ ಮೂಲಕ ಭರಮಾಡಿಕೊಳ್ಳಲಾಗಿದೆ ಆದರೆ ಈ ಘಟನೆ ಇನ್ನೊಂದು ಕೋಮಿನ ವಿದ್ಯಾರ್ಥಿಗಳಲ್ಲಿ ಮುಜುಗರವನ್ನುಂಟು ಮಾಡುತ್ತದೆ. ಎಳೆ ವಯಸ್ಸಿನ ಮಕ್ಕಳಲ್ಲಿ ಅಶಾಂತಿಯ ವಾತಾವರಣವನ್ನುಂಟು ಮಾಡುವ ವ್ಯವಸ್ಥೆ ಬಿಜೆಪಿಯ ಮೂಲಕ ಆಗುತ್ತಿದ್ದು, ಇದರ ನೇತೃತ್ವವನ್ನು ಶಾಸಕರೇ ನಿರ್ವಹಿಸಿದ್ದಾರೆ ಎಂದು ಆರೋಪಿಸಿದರು.
ಸಣ್ಣ ವಯಸ್ಸಿನಲ್ಲಿ ಆದರ್ಶ ವ್ಯಕ್ತಿಗಳ ಬಗ್ಗೆ ಅಧ್ಯಯನ ಮಾಡುವ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲಿ ಎನ್ನುವ ನಿಟ್ಟಿನಲ್ಲಿ ಅಂತಹ ವ್ಯಕ್ತಿಗಳ ಜೀವನ ಚರಿತೆಯನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸುತ್ತಾರೆ. ಆದರೆ ಇತ್ತೀಚಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು, ಕುವೆಂಪು ರಂತಹ ಮಹಾಲೇಖಕರ, ಭಗತ್ ಸಿಂಗ್ ರಂತಹ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯನ್ನು ಪಠ್ಯ ಪುಸ್ತಕದಿಂದ ತೆರೆಯಲಾಗಿದೆ. ಒಂದು ವೇಳೆ ಈ ಕೆಲಸವನ್ನು ಬೇರೆ ಯಾರದರೂ ಮಾಡಿದ್ದರೆ ಅವರು ವಿರೋಧಿಸುತ್ತಿದ್ದರೂ, ಅದೇ ರೀತಿ ಬಂದೂಕು ತರಬೇತಿ ಅಥವಾ ತ್ರಿಶೂಲ ದೀಕ್ಷೆಯನ್ನು ಬೇರೆ ಯಾವುದೇ ಸಂಘಟಕರು ಮಾಡಿದ್ದರೇ ಅತ್ಯಂತ ಹೀನಾಯವಾಗಿ ಅವರು ವಿರೋಧಿಸುತ್ತಿದ್ದರೂ, ತಪ್ಪು ಯಾರೂ ಮಾಡಿದರೂ ತಪ್ಪೇ ಆಗಬೇಕು, ಅವರು ಮಾಡಿದರು ತಪ್ಪೇ ಅಂತಹ ತಪ್ಪನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.