ಪುತ್ತೂರು: ಗಾಂಜಾ ಇರಿಸಿಕೊಂಡಿದ್ದ ಇಬ್ಬರನ್ನು ಪುತ್ತೂರು ನಗರ ಠಾಣೆ ಪೊಲೀಸರು ಶಾಂತಿಗೋಡು ಗ್ರಾಮದ ವೀರಮಂಗಲ ರೈಲ್ವೆ ಹಳಿ ಸಮೀಪ ಬಂಧಿಸಿ 21,500 ರೂ., ಮೌಲ್ಯದ ಗಾಂಜಾ ವಶಪಡಿಸಿಕೊಂಡಿರುವ ಘಟನೆ ಮೇ.22 ರಂದು ನಡೆದಿದೆ.
ಕಡಬ ತಾಲೂಕಿನ ಪೆರಾಬೆ ಗ್ರಾಮದ ಕೋಚಕಟ್ಟೆ ನಿವಾಸಿ ಉಮ್ಮರಬ್ಬ ಎಂಬವರ ಪುತ್ರ ಶಫೀಕ್ ಕೆ.ವಿ.(24) ಮತ್ತು ಕುಂತೂರು ಎರ್ಮಲ ನಿವಾಸಿ ಅಬ್ದುಲ್ಲಾ ಎಂಬವರ ಪುತ್ರರ ರಾಝಿಕ್ (28) ಬಂಧಿತ ಆರೋಪಿಗಳು.
ಇವರು ವೀರಮಂಗಲ ರೈಲ್ವೇ ಹಳಿಯ ಸಮೀಪ ಬ್ಯಾಗ್ ಹಿಡಿದುಕೊಂಡು ನಿಂತಿದ್ದರು. ಪೊಲೀಸರನ್ನು ಕಂಡ ಕ್ಷಣ ಪರಾರಿಯಾಗಲು ಯತ್ನಿಸಿದ ವೇಳೆ ಪೊಲೀಸರು ಅವರನ್ನು ಹಿಡಿದು ಪರಿಶೀಲಿಸಿದಾಗ ಆರೋಪಿಗಳ ಬ್ಯಾಗ್‌ನಲ್ಲಿ ಸುಮಾರು 1.850 ಗ್ರಾಂ ತೂಕದ ಗಾಂಜಾ ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ಗಾಂಜಾವನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕಾರ್ಯಚರಣೆಯಲ್ಲಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಮತ್ತು ಡಿವೈಎಸ್ಪಿ ಡಾ. ಗಾನ ಪಿ. ಕುಮಾರ್ ಅವರ ನಿರ್ದೇಶನದಂತೆ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್ ಅವರ ಮಾರ್ಗದರ್ಶನದಂತೆ ಎಸ್.ಐ.ಗಳಾದ ರಾಜೇಶ್ ಕೆ.ವಿ ಮತ್ತು ನಸ್ರಿನ್ ತಾಜ್ ಚಟ್ಟದಡಿ
ರವರ ನೇತೃತ್ವದಲ್ಲಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.