ವಿಟ್ಲ: ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ 2 ನೇ ವಾರ್ಡಿನ ವಿದ್ಯಾರ್ಥಿಗಳಾದ, ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ 625 ರಲ್ಲಿ 619 ಅಂಕಗಳಿಸಿದ ನಂಜುಡಯ್ಯ ಹಾಗೂ ಉಷಾ ದಂಪತಿಯ ಪುತ್ರಿ ಕಿರಣಶ್ರೀ ಮತ್ತು 625 ರಲ್ಲಿ 614 ಅಂಕಗಳಿಸಿದ ಚಂದ್ರಶೇಖರ ಶೆಟ್ಟಿ ಹಾಗೂ ಸೌಮ್ಯ ದಂಪತಿಯ ಪುತ್ರಿ ತೃಷಾ ಶೆಟ್ಟಿ ರನ್ನು ಬಿಜೆಪಿ 2 ನೇ ವಾರ್ಡ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಾರ್ಡ್ ಸದಸ್ಯೆ ಸಂಗೀತ ಪಾಣೆಮಜಲು, ನಿಕಟಪೂರ್ವ ಸದಸ್ಯ ಶ್ರೀಕೃಷ್ಣ ವಿಟ್ಲ, ವಾರ್ಡ್ ಅಧ್ಯಕ್ಷ ಭೋಜರಾಜ್ ಮಣಿಯಾಣಿ, ಪ್ರಧಾನ ಕಾರ್ಯದರ್ಶಿ ಹರೀಶ್ ಸೀಗೆಬಲ್ಲೆ, ಮಹಾಶಕ್ತಿ ಕೇಂದ್ರ ಸದಸ್ಯ ಜಗದೀಶ್ ಪಾಣೆಮಜಲು, ಮಹಿಳಾ ಮೋರ್ಚಾದ ರಶ್ಮಿ ಹರೀಶ್ ಉಪಸ್ಥಿತರಿದ್ದರು.