ಪುತ್ತೂರು: ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳ ಶೈಕ್ಷಣಿಕ ಹಾಗೂ ಮೂಲಭೂತ ಅಗತ್ಯತೆಯ ಬಗ್ಗೆ ಹಾಗೂ ಅದಕ್ಕಿರುವ ಪರಿಹಾರ ಎನ್ನುವ ವಿಷಯದಲ್ಲಿ ಎಲ್ಲಾ ಸರಕಾರಿ ಶಾಲೆಗಳ ಎಸ್. ಡಿ. ಎಂ. ಸಿ ಅಧ್ಯಕ್ಷ, ಸದಸ್ಯರುಗಳ ಸಭೆಯನ್ನು ಎಸ್ಡಿಎಂಸಿ ಸಮನ್ವಯ ವೇದಿಕೆಯ ಮೊಯ್ದಿನ್ ಕುಟ್ಟಿ ಕರೆದಿದ್ದು, ಈ ಸಭೆಯನ್ನು ಹಿಂದೂ ಜಾಗರಣ ವೇದಿಕೆ ವಿರೋಧಿಸಿದ್ದು, ರದ್ದುಗೊಳಿಸುವಂತೆ ಆಗ್ರಹಿಸಿದೆ.
ಎಸ್ಡಿಎಂಸಿ ಸಮನ್ವಯ ವೇದಿಕೆ ಯಾವುದೇ ಅಧಿಕೃತ ಸಂಸ್ಥೆ ಅಲ್ಲ, ಯಾರೋ ಮೂರನೇ ವ್ಯಕ್ತಿಯೊಬ್ಬರು ಎಲ್ಲಾ ಸರಕಾರಿ ಶಾಲೆಗಳ ಎಸ್. ಡಿ. ಎಂ. ಸಿ ಅಧ್ಯಕ್ಷ, ಸದಸ್ಯರುಗಳ ಸಭೆ ಕರೆಯುವುದು ಎಷ್ಟು ಸರಿ..?? ಈ ನಿಟ್ಟಿನಲ್ಲಿ ಈ ಸಭೆಯನ್ನು ರದ್ದುಗೊಳಿಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
ಈ ಬಗ್ಗೆ ತಾಲೂಕು ಶಿಕ್ಷಣ ಅಧಿಕಾರಿ ಲೋಕೇಶ್ ರವರು ಪ್ರತಿಕ್ರಿಯೆ ನೀಡಿದ್ದು, ಈ ವಿಚಾರ ಗಮನಕ್ಕೆ ಬಂದಿದೆ. ಕಾರ್ಯಕ್ರಮ ರದ್ದು ಮಾಡುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದರು. ಶಾಸಕರ ಸೂಚನೆ ಮೇರೆಗೆ ಶಿಕ್ಷಣಾಧಿಕಾರಿ ಸಂಬಂಧ ಪಟ್ಟವರಿಗೆ ಕಾರ್ಯಕ್ರಮ ರದ್ದು ಗೊಳಿಸಲು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ..






























