ಪುತ್ತೂರು : ಎಸ್.ಬಿ. ಎಂ ಕ್ರಿಯೇಷನ್ಸ್ ಅರ್ಪಿಸುವ “ಬೂಡುದ ಬಂಗಾರ್” ಕೊರಗಜ್ಜನ ಭಕ್ತಿದ ಸುಗಿಪು ಎಂಬ ತುಳು ಭಕ್ತಿಗೀತೆಯ ಪೋಸ್ಟರ್ ರಿಲೀಸ್ ಮಾ.28 ರಂದು ಶ್ರೀ ಆದಿನಾಗಬ್ರಹ್ಮ ಮುಗೇರ್ಕಳ ಗರಡಿ ಬೂಡು ಬೆಳ್ಳಾರೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಆಡಳಿತ ಸಮಿತಿ ಅಧ್ಯಕ್ಷರಾದ ಸುಂದರ ತೊಡಿಕಾನ, ಕಲಾರತ್ನ ಪ್ರಶಸ್ತಿ ಪುರಸ್ಕೃತ ಐತ್ತ ಪಾಟಾಜೆ, ಪ್ರಧಾನ ಕಾರ್ಯದರ್ಶಿ ವಿಜಯ ಪಾಟಾಜೆ, ಉಪಕಾರ್ಯದರ್ಶಿ ಯಶವಂತ ನಾರಾಯಣ ನೆಟ್ಟಾರು, ವಿಶ್ವನಾಥ ಬೀಡು, ಜತ್ತಪ್ಪ, ರಾಧಾ ಕಲಾಯಿ, ಕುಸುಮ ಬೀಡು, ಗಣೇಶ್, ಮಾಧವ, ವಸಂತ, ಭವಿತ್.
ಉದಯೋನ್ಮುಖ ಗಾಯಕಿ ಸವಿತಾ, ಉದಯೋನ್ಮುಖ ಸಾಹಿತಿ ನವೀನ್ ಎಂ, ನಿರ್ದೇಶಕರಾದ ರಾಕೇಶ್ಏಣ್ಮುರೂ ಹಾಗೂ ಸದಸ್ಯರಾದ ನಾಗೇಶ್ ಪಟ್ಟೆ,ರಘು ಕೋಡಿಂಬಾಳ, ಗುರು ಕೊಯಿಲ,ವೆಂಕಟೇಶ್ ಕಾಪುತ್ತಡ್ಕ,ಗಣೇಶ್ ಕೆಯ್ಯೂರು ಉಪಸ್ಥಿತರಿದ್ದರು.