ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಇಂದು ಗೊನೆ ಮುಹೂರ್ತ ನಡೆಯಿತು.
ದೇವಳದ ಗದ್ದೆಯ ಎದುರು ಭಾಗದ ಎಡಭಾಗದಲ್ಲಿರುವ ಕಂಬಳಕೋಡಿ ಮೋನಪ್ಪ ಸಪಲ್ಯರವರ ಮನೆಯ ತೋಟದಿಂದ ಗೊನೆಗೆ ಪೂಜೆ ನೆರವೇರಿಸಿ ಮುಹೂರ್ತ ಮಾಡಲಾಯಿತು. ದೇವಳದ ಪ್ರಧಾನ ಅರ್ಚಕ ವಿ. ಎಸ್ ಭಟ್ ರವರು ಗೊನೆ ಮುಹೂರ್ತ ನಡೆಸಿಕೊಟ್ಟರು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೇಶವ ಪ್ರಸಾದ ಮುಳಿಯ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳು ಮತ್ತು ಇನ್ನಿತರರು ಉಪಸ್ಥಿತರಿದ್ದರು.