ನವದೆಹಲಿ: ಪಾನ್ (Permanent Account Number)ಕಾರ್ಡ್ಗೆ ಮತ್ತು ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆ (ಐಟಿ) ಮತ್ತೊಂದು ಅವಕಾಶವನ್ನ ನೀಡಿದೆ. ಮಾ. 31ರೊಳಗೆ ನೀಡಿದ್ದ ಡೆಡ್ಲೈನನ್ನು 2021 ಜೂನ್ 30ರವರೆಗೆ ಅವಧಿಯನ್ನ ವಿಸ್ತರಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಅಂತಾ ವರದಿಯಾಗಿದೆ.
ಇದಕ್ಕೂ ಮೊದಲು ಮಾರ್ಚ್ 31ರೊಳಗಾಗಿ ಎಲ್ಲರೂ ತಮ್ಮ PAN ನಂಬರ್ಗೆ ಆಧಾರ್ ಲಿಂಕ್ ಅನ್ನ ಕಡ್ಡಾಯವಾಗಿ ಮಾಡಬೇಕು ಕೇಂದ್ರ ಸರ್ಕಾರ ಸುತ್ತೋಲೆಯನ್ನ ಹೊರಡಿಸಿತ್ತು. ಒಂದು ವೇಳೆ ಪ್ಯಾನ್ ಕಾರ್ಡ್ಗೆ ಆಧಾರ್ ನಂಬರ್ ಲಿಂಕ್ ಮಾಡದಿದ್ರೆ, ಪ್ಯಾನ್ ಕಾರ್ಡ್ ಇನ್ಮುಂದೆ ವರ್ಕ್ ಆಗಲ್ಲ ಎನ್ನಲಾಗ್ತಿತ್ತು. ಕೇಂದ್ರ ಸರ್ಕಾರ 2021ರ ಫೈನಾನ್ಸ್ ಬಿಲ್ ಕಳೆದ ವಾರ ಪಾಸ್ ಮಾಡಿದೆ. ಸೆಕ್ಷನ್ 234H ಅಡಿಯಲ್ಲಿ ಯಾರು ಪ್ಯಾನ್ ಕಾರ್ಡ್ ಮತ್ತು ಆಧಾರ್ ನಂಬರ್ ಲಿಂಕ್ ಮಾಡಲ್ವೋ ಅಂತವರಿಗೆ 1000ರೂ. ದಂಡವನ್ನೂ ವಿಧಿಸಲಾಗುತ್ತದೆ.