ಪುತ್ತೂರು : ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಆಗಿರುವಂತಹ ನಳಿನ್ ಕುಮಾರ್ ಕಟೀಲ್ ರವರ ಕುಂಜಾಡಿ ಮನೆತನದ ಧರ್ಮ ದೈವ ಹಾಗೂ ಉಪದೈವಗಳ ಧರ್ಮನಡಾವಳಿ ನೇಮೋತ್ಸವವು ಏ.8,9 ರಂದು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಏ.1 ರಂದು ಗೊನೆ ಮುಹೂರ್ತ ನಡೆಯಿತು. ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಸಂಸದರಾದ ನಳಿನ್ ಕುಮಾರ್ ಕಟೀಲ್, ಹಲವು ಗಣ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

