ಪುತ್ತೂರು: ಡಿವೈಡರ್ ಬಳಿ ಹಠಾತ್ ಬೈಕ್ ಅಡ್ಡ ಬಂದ ಪರಿಣಾಮ ಬ್ರೇಕ್ ಹಾಕುವ ವೇಳೆ ಆಕ್ಟಿವಾ ಸ್ಕಿಡ್ ಆದ ಘಟನೆ ಪುತ್ತೂರು ಮುಖ್ಯರಸ್ತೆಯ ಎಳ್ಮುಡಿ ಡಿವೈಡರ್ ಬಳಿ ನಡೆದಿದೆ.
ಆಕ್ಟಿವಾ ಸವಾರ ಪುತ್ತೂರು ಪೇಟೆಯ ಕಡೆಯಿಂದ ದರ್ಬೆ ಕಡೆಗೆ ತೆರಳುತ್ತಿದ್ದು, ಎಳ್ಮುಡಿ ಸಮೀಪದ ಡಿವೈಡರ್ ಬಳಿ ಬೈಕ್ ವೊಂದು ಅಡ್ಡವಾಗಿ ಹಠಾತ್ ಬಂದ ಹಿನ್ನೆಲೆ ಆಕ್ಟಿವಾ ಸವಾರ ಬ್ರೇಕ್ ಹಾಕಿದ ವೇಳೆ ಸ್ಕಿಡ್ ಆಗಿ ಬಿದ್ದಿದ್ದಾರೆ ಎನ್ನಲಾಗಿದೆ.
ಆಕ್ಟಿವಾ ಸವಾರನಿಗೆ ಸಣ್ಣ ಪುಟ್ಟ ಗಾಯಾಗಳಾಗಿದ್ದು, ಬೈಕ್ ಸವಾರ ನಿಲ್ಲಿಸದೆ ತೆರಳಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.