ಮಂಗಳೂರು: ವಿಶೇಷವಾಗಿ ವಿನ್ಯಾಸಗೊಳಿಸಿದ ಜೀನ್ಸ್ ಪ್ಯಾಂಟ್ , ಒಳ ಉಡುಪು ಹಾಗೂ ನೀ ಪ್ಯಾಡ್ (ಮೊಣಕಾಲಿಗೆ ಧರಿಸುವ ಸುರಕ್ಷಾ ಪ್ಯಾಡ್) ನಲ್ಲಿ 92,27,590 ಲಕ್ಷ ರೂ ಮೌಲ್ಯದ 1.993 ಕೆ.ಜಿ ಚಿನ್ನವನ್ನು ಅಡಗಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಓರ್ವನನ್ನು ಏ.3 ರ ಮುಂಜಾನೆ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ಉಳ್ಳಾಲದ ಮೊಹಮ್ಮದ್ ಆಶಿಫ್ ( 28 ) ಎಂದು ಗುರುತಿಸಲಾಗಿದೆ. ಈತ ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ ಆಗಮಿಸಿದ್ದ. ಈತನನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಕಾರ್ಯಚರಣೆಯಲ್ಲಿ ಕಸ್ಟಮ್ಸ್ ಡೆಪ್ಯುಟಿ ಕಮಿಷನರ್ ಅವಿನಾಶ್ ಕಿರಣ್ ರೊಂಗಾಲಿ ನೇತೃತ್ವದಲ್ಲಿ ಅಧಿಕಾರಿಗಳಾದ ಶ್ರೀಕಾಂತ್ ಸತೀಶ್ ಭಾಗವಹಿಸಿದ್ದರು.