ಪುತ್ತೂರು: ಹದಿನೈದು ದಿನಗಳ ಹಿಂದೆ ಕಾಶಿಗೆ ಪಾದಯಾತ್ರೆ ಆರಂಭಿಸಿದ್ದ ಸರ್ವೆ ನಿವಾಸಿ ಮೋಹನ್ ಕಲ್ಲೂರಾಯ ಸರ್ವೆ(65) ರವರು ಸೆ.6 ರಂದು ಬೆಳಗ್ಗೆ ಹೈದರಾಬಾದ್ ನಲ್ಲಿ ಎದೆನೋವು ಕಾಣಿಸಿಕೊಂಡು ನಂತರ ಮೃತಪಟ್ಟಿದ್ದಾರೆ.
ಮೋಹನ್ ಕಲ್ಲೂರಾಯ ರವರು ಕೋ ಆಪರೇಟಿವ್ ಸೊಸೈಟಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನಿವೃತ್ತರಾಗಿದ್ದರು.
ಮೋಹನ್ ಕಲ್ಲೂರಾಯ ರವರು 15 ದಿನಗಳ ಹಿಂದಷ್ಟೇ ಕಾಶಿಗೆ ಪಾದಯಾತ್ರೆ ಆರಂಭಿಸಿದ್ದರು. ಇವರು ಸುಮಾರು 18 ಬಾರಿ ಶಬರಿಮಲೆಗೂ ಕೂಡ ಪಾದಯಾತ್ರೆ ಮೂಲಕ ತೆರಳಿದ್ದರು.
ಸರ್ವೆ ಸುಬ್ರಾಯ ದೇವಸ್ಥಾನದ ಬ್ರಹ್ಮಕಲಶ ದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು., ಹಾಗೂ ಅಪಾರ ಧನ ಸಂಗ್ರಹ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಜಾಹ್ನವಿ, ಮಕ್ಕಳಾದ ಶಭರೀಷ್, ಸ್ಕಂದೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.