ಕಡಬ: ದೇವಸ್ಥಾನ ಮತ್ತು ಸಾರಾಯಿ ಅಂಗಡಿಗೆ ಹೋಗು ಒಂದೇ ಎಂದು ಬರೆದು ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ ಬಗ್ಗೆ ಎಸ್.ಡಿ.ಪಿ.ಐ ಮುಖಂಡ ವಿಕ್ಟರ್ ಮಾರ್ಟಿಸ್ ವಿರುದ್ದ ಹಿಂದೂ ಸಂಘಟನೆಯ ಮುಖಂಡರು ಕಡಬ ಪೋಲಿಸರಿಗೆ ದೂರು ನೀಡಿದ್ದು, ದೂರು ನೀಡಿದ ಬೆನ್ನಲ್ಲೆ ವಿಕ್ಟರ್ ಮಾರ್ಟಿಸ್ ಸ್ಟೇಟಸ್ ಡಿಲೀಟ್ ಮಾಡಿ ಕ್ಷಮೆಯಾಚಿಸುವ ಸ್ಟೇಟಸ್ ಅಳವಡಿಸಿಕೊಂಡ ಘಟನೆ ಸೆ.10 ರಂದು ನಡೆದಿದೆ.
ಎಸ್.ಡಿ.ಪಿ.ಐ ಸಕ್ರಿಯ ಮುಖಂಡರಾಗಿರುವ ವಿಕ್ಟರ್ ಮಾರ್ಟಿಸ್ ತನ್ನ ಸ್ಟೇಟಸ್ ನಲ್ಲಿ ದೇವಸ್ಥಾನಕ್ಕೆ ಮತ್ತು ಬಾರ್ ಗೆ ಮದ್ಯಪಾನ ಅಂಗಡಿಗೆ ಹೋಗುವುದು ಕ್ಷಣಿಕ ನೆಮ್ಮದಿಗಾಗಿ ಎಂದು ಸ್ಟೇಟಸ್ ಹಾಕಿಕೊಂಡಿದ್ದ, ಈ ಸ್ಟೇಟಸ್ ನಿಂದ ಹಿಂದೂಗಳ ಭಾವನೆ ಗೆ ನೋವಾಗಿದೆ ಎಂದು ವಿ.ಹಿಂ.ಪ ವತಿಯಿಂದ ಕಡಬ ಪೋಲಿಸರಿಗೆ ದೂರು ನೀಡಲಾಗಿತ್ತು.
ಈ ಸಂದರ್ಭದಲ್ಲಿ ಹಿಂದೂ ಸಂಘಟನೆಯ ಪ್ರಮುಖರಾದ ವಾಸುದೇವ ಕೊಳ್ಳೆಸಾಗು, ಸಂತೋಷ್ ಕುಮಾರ್ ಕೊಡಿಬೈಲು, ಪ್ರಮೋದ್ ರೈ, ಗಿರೀಶ್ ಎ.ಪಿ. ಪ್ರಕಾಶ್ ಎನ್ .ಕೆ.ರಘುರಾಮ ನಾಯ್ಕ್, ಮಾಧವ ಕೋಲ್ಪೆ, ಸೀತಾರಾಮ ಗುರುಕೃಪಾ, ಲಿಂಗಪ್ಪ ದೊಡ್ಡಕೊಪ್ಪ, ಸದಾನಂಧ ಬಿರ್ವ, ಜಿನಿತ್ ಕುಮಾರ್, ಗಣೇಶ್ ಮೀನಾಡಿ,ತಿಲಕ್ ರೈ, ಮನೋಜ್ ಖಂಡಿಗ ಮೊದಲಾದವರು ಉಪಸ್ಥಿತರಿದ್ದರು.