ಸುಳ್ಯ: ಮಹಿಳೆಯೋರ್ವರಿಗೆ ಯುವಕನೊಬ್ಬ ಕತ್ತಿಯಿಂದ ಕಡಿದ ಘಟನೆ ಸುಳ್ಯ ತಾಲೂಕಿನ ತೊಡಿಕಾನದಲ್ಲಿ ಸೆ.10 ರಂದು ನಡೆದಿದೆ.
ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತೊಡಿಕಾನ ಕಲ್ಲಂಬಳದ ಹರಿಣಾಕ್ಷಿ ಗಾಯಗೊಂಡವರು. ಆರೋಪಿ ಸುರೇಂದ್ರ ತಲೆಮರೆಸಿಕೊಂಡಿದ್ದಾನೆ.
ತೊಡಿಕಾನ ಶಾಲೆಯಲ್ಲಿ ಬಿಸಿಯೂಟ ಅಡುಗೆ ಸಿಬ್ಬಂದಿಯಾಗಿರುವ ಹರಿಣಾಕ್ಷಿ ಅವರು ಸಂಜೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಸಂದರ್ಭ ಕಲ್ಲಂಬಳ ಬಸ್ ನಿಲ್ದಾಣದ ಬಳಿ ಕಾದು ಕುಳಿತ್ತಿದ್ದ ಆರೋಪಿ ಏಕಾಏಕಿ ಕತ್ತಿಯಿಂದ ಮಹಿಳೆಗೆ ಕಡಿದಿದ್ದಾನೆ. ಗಂಟಲಿನ ಭಾಗಕ್ಕೆ ಆತ ಕಡಿಯಲು ಮುಂದಾಗಿದ್ದರಿಂದ ಕೂಡಲೇ ಮಹಿಳೆ ಎರಡೂ ಕೈಗಳನ್ನು ಅಡ್ಡ ಹಿಡಿದಿದ್ದಾರೆ. ಈ ವೇಳೆ ಎರಡೂ ಕೈಗಳಿಗೆ ಕತ್ತಿ ಏಟು ಬಿದ್ದಿದೆ. ಅಲ್ಲದೆ ಸೊಂಟದ ಭಾಗಕ್ಕೂ ಆತ ಕಡಿದಿದ್ದಾನೆ ಎಂದು ತಿಳಿದು ಬಂದಿದೆ.
ಕತ್ತಿಯೇಟಿನಿಂದ ಗಂಭೀರ ಗಾಯಗೊಂಡ ಮಹಳೆಯನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಸದ್ಯ ಆರೋಪಿ ಪರಾರಿಯಾಗಿದ್ದಾನೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.