ಸುಳ್ಯ: ಮನೆಯಲ್ಲಿ ಯಾರು ಇಲ್ಲದ ವೇಳೆ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.11 ರಂದು ಅರಂತೋಡಿನಲ್ಲಿ ನಡೆದಿದೆ.
ಮೃತರನ್ನು ಅರಂತೋಡಿನ ಹೊನ್ನಪ್ಪ ಮಡಿವಾಳ ರವರ ಪುತ್ರ ಕೇಶವ ಎಂದು ಗುರುತಿಸಲಾಗಿದೆ.

ಸೆ.10 ರಂದು ಮನೆಯವರೆಲ್ಲಾ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ತೆರಳಿದ್ದು, ಕೇಶವ ಮಾತ್ರ ಮನೆಯಲ್ಲಿದ್ದ ಎನ್ನಲಾಗಿದೆ.
ಮನೆಯ ಮಹಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸೆ.11 ರಂದು ದೇವಸ್ಥಾನಕ್ಕೆ ತೆರಳಿದ್ದ ತಂದೆ-ತಾಯಿ ಬಂದು ಬಾಗಿಲು ತೆರೆದು ನೋಡಿದಾಗ ಯುವಕನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ.
ಡೆತ್ ನೋಟ್ ಪೊಲೀಸರಿಗೆ ಲಭಿಸಿದ್ದು, ಲ್ಯಾಪ್ ಟಾಪ್ ಅನ್ನು ಠಾಣೆಗೆ ಕೊಂಡೊಯ್ದಿದ್ದಾರೆಂದು ತಿಳಿದು ಬಂದಿದೆ.
ಕೇಶವ ರವರು ಅವಿವಾಹಿತರಾಗಿದ್ದು, ಈ ಹಿಂದೆ ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸದ್ಯ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಿದ್ದರು.
ಮೃತರು ತಂದೆ,ತಾಯಿ, ಸಹೋದರ, ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.