ಪುತ್ತೂರು: ಹಿಂದೂ ಸಂಘಟನೆಯ ಹಿತೈಷಿ ದಿ.ನಿತಿನ್ ಪ್ರಸಾದ್ ಹೆಗ್ಡೆಯವರಿಗೆ ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲದ ವತಿಯಿಂದ ಶ್ರದ್ಧಾಂಜಲಿ ಸಭೆ ಸೆ.11 ರಂದು ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಗಣೇಶ್ ರೈ ಮುಳಿಪಡ್ಪು ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿದರು. ಗೌರೀಶ್ ಈಶ್ವರಮಂಗಲ ನಿರೂಪಿಸಿ, ಕಿಶನ್ ಶೆಟ್ಟಿ ಮೇನಾಲ ಮತ್ತು ಚಿನ್ಮಯ್ ಈಶ್ವರಮಂಗಲ ನುಡಿನಮನ ಸಲ್ಲಿಸಿದರು.

ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಿ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯ ಮಾಡಲಾಯಿತು. ರಾಮ್ ಪ್ರಸಾದ್ ಆಳ್ವ ಮೇನಾಲ, ಪ್ರದೀಪ್ ರೈ ಮೇನಾಲ, ಅಮರನಾಥ್ ಆಳ್ವ ಕರ್ನೂರು, ರಾಜೇಶ್ ಪಂಚೋಡಿ, ಅಣ್ಣಯ್ಯ ಗೌಡ, ಗೀತೇಶ್ ಪುತ್ತೂರು, ಚರಣ್ ,ಸತೀಶ್,ಹೊನ್ನಪ್ಪ ಗೌಡ ಮುಂತಾದವರು ಉಪಸ್ಥಿತರಿದ್ದರು.
