ವಿಟ್ಲ: ತಮ್ಮನೇ ಅಣ್ಣನ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಟ್ಲಪಡ್ನೂರು ಗ್ರಾಮದ ಕೊಡಂಗೆ ದಿ. ಸೀನಪ್ಪ ದೇವಾಡಿಗ ರವರ ಪುತ್ರ ಪದ್ಮನಾಭ ಬಂಗೇರ(49) ಬಂಧಿತ ಆರೋಪಿ.

ವಿಟ್ಲಪಡ್ನೂರು ಗ್ರಾಮದ ಕೊಡಂಗೆ ದಿ. ಸೀನಪ್ಪ ದೇವಾಡಿಗ ರವರ ಪುತ್ರ ಗಣೇಶ್ ಬಂಗೇರ(54) ಮೃತ ವ್ಯಕ್ತಿ.
ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಕೊಡಂಗೆ-ಬನಾರಿ ಎಂಬಲ್ಲಿ ಗಣೇಶ್ ಬಂಗೇರ ಮತ್ತು ಪದ್ಮನಾಭ ಬಂಗೇರ ರವರು ತಮ್ಮ ತಾಯಿಯ ಜೊತೆ ವಾಸವಾಗಿದ್ದು, ಪದ್ಮನಾಭ ಬಂಗೇರನು ತನ್ನ ಅಣ್ಣ ಗಣೇಶ್ ಬಂಗೇರನಿಗೆ ಯಾವುದೋ ದ್ವೇಷದಿಂದ ಹಲ್ಲೆ ನಡೆಸುತ್ತಿದ್ದು. 1-2 ಬಾರಿ ಗಣೇಶ್ ರವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಹಾಗೂ ಆರೋಪಿಯು ಗಣೇಶ್‌ನನ್ನು ಕೊಲ್ಲುವುದಾಗಿ ಕೂಡ ಹೇಳಿಕೊಳ್ಳುತ್ತಿದ್ದು, ಸೆ.13 ರಂದು ರಾತ್ರಿ ಸಮಯದಲ್ಲಿ ಪದ್ಮನಾಭ ಬಂಗೇರ ರವರು ಗಣೇಶ್ ಬಂಗೇರ ರವರನ್ನು ತಲೆ,ಎದೆ ಹಾಗೂ ಮುಖಕ್ಕೆ ಯಾವುದೋ ಆಯುಧದಿಂದ ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕವಾಗಿ ಹೊಡೆದು ಗಾಯಗೊಳಿಸಿ ಕೊಲೆ ಮಾಡಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ 143/2022 ಕಲಂ: 302,201 ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಎಸ್.ಪಿ., ಎಎಸ್ಪಿ ಭೇಟಿ :
ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಹಾಗೂ ಎಎಸ್ಪಿ ಕುಮಾರ ಚಂದ್ರ ರವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.


