ಮಂಜೇಶ್ವರ: ಕೆಲಸಕ್ಕೆಂದು ತಿಳಿಸಿ ಹೋದ ನಿರ್ಮಾಣ ಕಾರ್ಮಿಕ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿದೆ.
ಹೊಸಬೆಟ್ಟು ನಿವಾಸಿ ದಿ. ತಿಮ್ಮಪ್ಪ ಎಂಬವರ ಪುತ್ರ ಗಿರೀಶ್ ಕುಮಾರ್ (44) ನಾಪತ್ತೆಯಾದವರು.

ಗಿರೀಶ್ ರವರ ಪತ್ನಿ ರಮಿತ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೆ.12 ರಂದು ಬೆಳಗ್ಗೆ ಕೆಲಸಕ್ಕೆಂದು ತಿಳಿಸಿ ಗಿರೀಶ್ ಕುಮಾರ್ ತೆರಳಿದ್ದಾರೆ. ಅಂದು ಸಂಜೆ 4 ಗಂಟೆಗೆ ಅವರ ಮೊಬೈಲ್ ಗೆ ಪತ್ನಿ ಕರೆ ಮಾಡಿ ಮಾತನಾಡಿದ್ದಾರೆ. ಆದರೇ ಅಂದು ಸಂಜೆ ಮನೆಗೆ ತಲುಪದೆ ಇರುವುದರಿಂದ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.